
ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸೆ. 25 ರಂದು (SVAMITVA) ಸ್ವಾಮಿತ್ವ ಯೋಜನೆಯ ವಿಶೇಷ ಗ್ರಾಮ ಸಭೆ ನಡೆಯಿತು. ಈ ಸಂದರ್ಭದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಆರ್.ವೆಂಕಟೇಶ್, ಭೂ ದಾಖಲೆಗಳ ಇಲಾಖಾ ಸೂಪರ್ ವೈಸರ್ ಸಿಂಗಾರ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್., ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಉಪಸ್ಥಿತರಿದ್ದರು.
ಡ್ರೋನ್ ಕ್ಯಾಮೆರಾದ ಮೂಲಕ ಸ್ವಾಮಿತ್ವ ಯೋಜನೆಯಲ್ಲಿ 10 ಮನೆಗಳಿಗಿಂತ ಹೆಚ್ಚಿನ ಮನೆಗಳಿರುವ ವಸತಿ ಸಮುಚ್ಚಯದ ಅಳತೆ ಕಾರ್ಯವನ್ನು ಕೈಗೊಳ್ಳುವುದರ ಉದ್ದೇಶ ಮತ್ತು ಉಪಯೋಗಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ವಿಶೇಷ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಲಾಯಿತು.