ಗ್ರಾಮವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು(ರಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು ಇವುಗಳ ಸಹಭಾಗಿತ್ವದಲ್ಲಿ ವಾರಗಳ ಕಾಲ ನಡೆದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಇಂದು ಸಮಾಪನಗೊಂಡಿತು. ಆರ್ ಎಸ್ ಎಸ್ ಪ್ರಮುಖರಾದ ಡಾ| ಪ್ರಭಾಕರ ಭಟ್ ದೀಪ ಪ್ರಜ್ವಲನೆಗೊಳಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ ಭಟ್, ಸಂಘ ಚಾಲಕರಾದ ಚಂದ್ರಶೇಖರ ಭಟ್ ತಳೂರು, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಸಹಕಾರಿ ಸಂಘದ ಉಪಾಧ್ಯಕ್ಷ ಎ ಎನ್ ಕಿಶೋರ್ ಕುಮಾರ್, ಗ್ರಾಮ ವಿಕಾಸ ಸಮಿತಿಯ ವಿನೋದ್ ಬೊಳ್ಮಲೆ, ಪಿಡಿಓ ಶ್ಯಾಮ ಪ್ರಸಾದ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ., ನಿರ್ದೇಶಕರಾದ ಬಿ.ಕೆ.ಬೆಳ್ಯಪ್ಪ ಗೌಡ, ಎ.ವಿ.ತೀರ್ಥರಾಮ, ಮುಳಿಯ ಕೇಶವ ಭಟ್, ಕೃಷ್ಣಯ್ಯ ಮೂಲೆತೋಟ, ಬಿ.ವಿ.ರವಿಪ್ರಕಾಶ್, ನವೀನ್ ಬಾಳುಗೋಡು, ಜಯಪ್ರಕಾಶ್ ಮೊಗ್ರ, ಮಂಜುಳ ಮುತ್ಲಾಜೆ , ರಾ.ಸ್ವ.ಸೇ ಸಂಘದ ನ.ಸೀತಾರಾಮ, ತರಬೇತಿ ಸಂಯೋಜಕರಾದ ಕಿಶೋರ್ ಕುಮಾರ್ ಪೈಕ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿಬಿರದ ಶಿಕ್ಷಕರು ಹಾಗೂ ತರಬೇತುದಾರರನ್ನು ಸನ್ಮಾನಿಸಲಾಯಿತು.
ಶಿಬಿರಾರ್ಥಿಯಾಗಿದ್ದು ಮನೆಗೆ ತೆರಳುವ ವೇಳೆ ಬಿದ್ದು ಸಿಕ್ಕಿದ ಒಂದು ಲಕ್ಷ ಮೌಲ್ಯದ ಚಿನ್ನದ ಸರವನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಗುತ್ತಿಗಾರು ಗ್ರಾಮದ ಪೈಕ ರಾಜ ಸಿ.ಎಚ್. ರವರ ಮಗ ಆಶಾಕಿರಣ್ ನನ್ನು ಡಾ.ಪ್ರಭಾಕರ ಭಟ್ ಗೌರವಿಸಿದರು. ವೆಂಕಟ್ ದಂಬೆಕೋಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿಶೋರ್ ಕುಮಾರ್ ಪೈಕ ವಂದಿಸಿದರು.