ತೋಟಗಾರಿಕೆ ಇಲಾಖೆ ಸುಳ್ಯ , ತಾಲೂಕು ಪಂಚಾಯತ್ ಆಶ್ರಯದಲ್ಲಿ ಸೆ.25 ರಂದು ಕೊಲ್ಲಮೊಗ್ರ ಗ್ರಾ.ಪಂ. ಸಭಾಂಗಣದಲ್ಲಿ ಸಂಜೀವಿನಿ ಸಂಘದ ಸದಸ್ಯರಿಗೆ ಹಣ್ಣು ಸಂಸ್ಕರಣೆ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು. ತಾ. ಪಂ. ಸದಸ್ಯರಾದ ಉದಯ ಕೊಪ್ಪಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಪಂಚಾಯಿತ್ ನ ಸಂಜೀವಿನಿ ತಾಲೂಕು ಮೇಲ್ವಿಚಾರಕರಾದ ಮಹೇಶ್ ಮಾಹಿತಿ ನೀಡಿ ಕಾರ್ಯಕ್ರಮ ನಿರೂಪಿಸಿದರು. ತೋಟಗಾರಿಕಾ ಇಲಾಖೆಯ ಸುಹಾನರವರು ಸ್ವಾಗತಿಸಿ, ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು ಒಕ್ಕೂಟ ದ ಅಧ್ಯಕ್ಷ ರಾದ ಅನಿತರವರು ಅನಿಸಿಕೆಗಳನ್ನು ಹಂಚಿಕೊಂಡರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ರವರು ವಂದಿಸಿದರು. ಒಕ್ಕೂಟದ ಕಾರ್ಯದರ್ಶಿ, ಸದಸ್ಯರು ಮತ್ತು ಎಂ.ಬಿ.ಕೆ ಎಲ್ .ಸಿ ಆರ್.ಪಿ ಗಳು, ಸಂಜೀವಿನಿ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಹಾಜರಿದ್ದರು.
- Friday
- November 1st, 2024