

ನಡುಗಲ್ಲಿನಿಂದ ಗುತ್ತಿಗಾರು ಮಾರ್ಗವಾಗಿ ಪಂಜಕ್ಕೆ ಹೋಗುತ್ತಿದ್ದ ನವರತ್ನ ಮೊಬೈಲ್ ಶಾಪ್ ನ ಮಾಲಕ ಪ್ರದೀಪ್ ಅಂಬೇಕಲ್ಲು ರವರ ಸುಮಾರು ಒಂದು ಲಕ್ಷ ಮೌಲ್ಯದ ಚಿನ್ನದ ಸರ ಬಿದ್ದು ಬಿದ್ದು ಹೋದ ಘಟನೆ ಸೆ.24 ರಂದು ನಡೆದಿತ್ತು. ಅಂದು ಗುತ್ತಿಗಾರಿನ ಇಂಡಿಯನ್ ಪೆಟ್ರೋಲ್ (ಮಾತಾ)ಪಂಪಲ್ಲಿ ಪೆಟ್ರೋಲ್ ತುಂಬಿಸಲು ಬಂದಿದ್ದ ಪೈಕದ ರಾಜ ಸಿ ಹೆಚ್ ರವರ ಮಗ ಆಶಾಕಿರಣ್ ಪೈಕ ರವರಿಗೆ ಈ ಸರ ಸಿಕ್ಕಿತ್ತು. ಅದನ್ನು ಪೆಟ್ರೋಲ್ ಪಂಪ್ ಸಿಬ್ಬಂದಿಗಳ ಕೈಯಲ್ಲಿ ಕೊಟ್ಟು ಅವರು ಹೋಗಿದ್ದರು. ಇಂದು ವಾಟ್ಸಾಪ್ ಗ್ರೂಪ್ ನಲ್ಲಿ ಚೈನ್ ಬಿದ್ದು ಹೋಗಿರುವ ಮೇಸೇಜ್ ನೋಡಿ ಪ್ರದೀಪ್ ಅಂಬೇಕಲ್ಲು ರವರಿಗೆ ಪೋನ್ ಮಾಡಿ ಚೈನ್ ಸಿಕ್ಕಿರುವ ವಿಷಯ ತಿಳಿಸಿರುತ್ತಾರೆ. ಅದನ್ನು ಪೆಟ್ರೋಲ್ ಪಂಪಿನ ಸಿಬ್ಬಂದಿಗಳ ಬಳಿ ಕೊಟ್ಟಿದ್ದೇನೆ ಎಂದು ಪೋನಿನಲ್ಲಿ ತಿಳಿಸಿ ಪ್ರಾಮಾಣಿಕತೆ ಮೆರೆದಿರುತ್ತಾರೆ. ಎರಡು ವರ್ಷಗಳ ಹಿಂದೆ ಮೈಸೂರು ದಸರಾ ಸಮಯದಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಆಶಾಕಿರಣ್ ಗೆ ಬಿದ್ದು ಸಿಕ್ಕಿದ ಸುಮಾರು ನಲವತ್ತು ಸಾವಿರ ನಗದು ಇದ್ದ ಪರ್ಸ್ ನ್ನು ಅದರ ಮಾಲಕರು ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದರು. ಇವರ ಈ ಪ್ರಾಮಾಣಿಕತೆಗೆ ಜನ ಭೇಷ್ ಅನ್ನುತ್ತಿದ್ದಾರೆ.