
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲೂಕು ಬೆಳ್ಳಾರೆ ವಲಯದ ವತಿಯಿಂದ ಐವರ್ನಾಡು ಒಕ್ಕೂಟದ ಜ್ಞಾನಶ್ರೀ ಸ್ವ ಸಹಾಯ ಸಂಘದ ಸದಸ್ಯರಾದ ಪ್ರೇಮ ನಾಯಕ್ ಅವರ ಮನೆಗೆ ಪ್ರಾಕೃತಿಕ ವಿಕೋಪದಡಿಯಲ್ಲಿ ಮನೆ ಹಾನಿಗೆ 5000ರೂ ಸಹಾಯಧನದ ಚೆಕ್ಕನ್ನು ಸುಳ್ಯ ಯೋಜನೆ ಕಚೇರಿಯಲ್ಲಿ ಪ್ರಬಂಧಕರಾದ ಜನಾರ್ದನ ಅವರು ವಿತರಿಸಿದರು .ಈ ಸಂದರ್ಭ ಬೆಳ್ಳಾರೆ ವಲಯದ ಮೇಲ್ವಿಚಾರಕರಾದ ಮುರಳಿಧರ ಎ. ಉಪಸ್ಥಿತರಿದ್ದರು.