Ad Widget

ಕೇಂದ್ರ ಸರಕಾರ ಜಾರಿಗೆ ತಂದ ಮಸೂದೆ ವಿರೋಧಿಸಿ ಸೆ.25 ರಂದು ನಡೆಯಲಿರುವ ಪ್ರತಿಭಟನೆಗೆ ಸುಳ್ಯ ಕಾಂಗ್ರೆಸ್ ಹಾಗೂ ದಲಿತ್ ಸೇವಾ ಸಮಿತಿ ಬೆಂಬಲ

ಕೇಂದ್ರ ಬಿ ಜೆ ಪಿ ಸರ್ಕಾರದ ರೈತವಿರೋಧಿ ನೀತಿಗಳ ಹಾಗೂ ರೈತ ವಿರೋಧಿ ಮಸೂದೆ ಜಾರಿ ಮಾಡಿದೆ ಎಂದು ವಿರೋಧಿಸಿ ಕರ್ನಾಟಕ ರಾಜ್ಯ ವ್ಯಾಪಿ ರೈತ ಸಂಘ ಹಾಗೂ ರೈತಪರ ಸಂಘಟನೆ ಗಳು ಸೆ.25 ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಯಲಿದೆ ಎನ್ನಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಈ ಪ್ರತಿಭಟನೆ ಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ನಡೆಯುವ ರೈತಪರ ಸಂಘಟನೆ ಗಳು ನಡೆಸುವ ಪ್ರತಿಭಟನೆ ಯಲ್ಲಿ ಭಾಗವಹಿಸಲಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ. ಅದೇ ರೀತಿ ಸುಳ್ಯ ದಲಿತ್ ಸೇವಾ ಸಮಿತಿ ಸಂಘಟನೆಯವರು ಈ ಪ್ರತಿಭಟನೆಗೆ ಬೆಂಬಲವನ್ನು ಘೋಷಿಸಿದ್ದು ತಾಲೂಕು ಸಮಿತಿಯ ಎಲ್ಲಾ ಸದಸ್ಯರು ಪ್ರತಿಭಟನೆಗೆ ಭಾಗವಹಿಸುವಂತೆ ಸುಳ್ಯ ದಲಿತ್ ಸೇವಾ ಸಮಿತಿ ಸಂಘದ ಅಧ್ಯಕ್ಷ ವಸಂತ ಕುದ್ಪಾಜೆ ತಿಳಿಸಿದ್ದಾರೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!