
ಸುಳ್ಯ ನಗರ ಪಂಚಾಯತ್‌ನಲ್ಲಿ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಪೌರ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪೌರ ಕಾರ್ಮಿಕರಾದ ಗಂಭೀರ್ ಮತ್ತು ಮಾಲತಿ ಉದ್ಘಾಟಿಸಿದರು.
ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಬಹುಮಾನ ವಿತರಣಾ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ನಡೆಯಿತು.
ಪೌರ ಕಾರ್ಮಿಕ ಸಂಘದ ಅಧ್ಯಕ್ಷ ತಿಮ್ಮಪ್ಪ, ನಗರ ಪಂಚಾಯತ್ ಸದಸ್ಯರಾದ ಸುಧಾಕರ, ಉಮ್ಮರ್ ಕೆ ಎಸ್, ವಾಣಿಶ್ರೀ ಜಟ್ಟಿಪಳ್ಳ, ಪೂಜಿತಾ ಶಿವಪ್ರಸಾದ್, ಶಿಲ್ಪಾ ಸುದೇವ್, ಶೀಲಾವತಿ ಕುರುಂಜಿ, ಶಶಿಕಲಾ ನೀರಬಿದಿರೆ,ಸರೋಜಿನಿ ಪೆಲ್ತಡ್ಕ, ನಗರ ಪಂಚಾಯತ್ ಉದ್ಯೋಗಿಗಳಾದ ಸುನೀತಾ, ಶಶಿಕಲಾ ಮಯ್ಯ ಉಪಸ್ಥಿತರಿದ್ದರು.
ನಗರ ಪಂಚಾಯತ್ ಸಿಬ್ಬಂದಿಗಳಾದ ದಿಲೀಪ್ ಪ್ರಾರ್ಥಿಸಿ. ಸ್ವಾತಿ ಸ್ವಾಗತಿಸಿ, ಸುದೇವ್ ವಂದಿಸಿದರು