ಕಡಬ ತಾಲೂಕಿನಲ್ಲಿರುವ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಸೆ.24ರಿಂದ ಆಶ್ಲೇಷ ಸೇವೆಗಳನ್ನು ಹೆಚ್ಚಳಗೊಳಿಸಲಾಗುತ್ತಿದೆ.ಸಂಜೆ ಆಶ್ಲೇಷ ಸೇವೆ ಆರಂಬಿಸಲಾಗುವುದು ಎಂದು ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ರೂಪಾ ಎಂ.ಜೆ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.24 ರಿಂದ ಬೆಳಗ್ಗೆ ಎರಡು ಹಂತದಲ್ಲಿ ತಲಾ 75 ರಂತೆ 150, ಸಂಜೆ 75 ರಂತೆ ದಿನವೊಂದಕ್ಕೆ 225 ಸೇವೆ ನಡೆಸಲು ಅನುಕೂಲ ಮಾಡಿಕೊಡಲಾಗುತ್ತಿದೆ.ರವಿವಾರ ಮತ್ತು ಆಶ್ಲೇಷ ನಕ್ಷತ್ರದಂತ ವಿಶೇಷ ದಿನಗಳಲ್ಲಿ 75ರ ಬದಲಿ ತಲಾ 100 ಪೂಜೆ ನೆರವೇರಿಸಲಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಸೇವೆ ನಡೆಸಲು ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು. ಸದ್ಯ ಸಣ್ಣ ಮಕ್ಕಳಿಗೆ ಅನ್ನ ಪ್ರಸಾದ ವಿತರಣೆ ಮಾಡಲಾಗುತಿಲ್ಲ ಎಂದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಹೆಚ್. ರವೀಂದ್ರ ಉಪಸ್ಥಿತರಿದ್ದರು.