ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಬೆಳ್ಳಾರೆ ವಲಯ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಶ್ರೀ ರಕ್ಷ ಗೊಂಚಲು ಸಮಿತಿ ಹಾಗೂ ಕಳಂಜ ಗ್ರಾಮಪಂಚಾಯತ್ ಆಶ್ರಯದಲ್ಲಿ ಅಯ್ಯನಕಟ್ಟೆ ಸಭಾಭವನದಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆ.22ರಂದು ನಡೆಯಿತು .
ಶ್ರೀ ರಕ್ಷ ಗೊಂಚಲು ಸಮಿತಿ ಇದರ ಅಧ್ಯಕ್ಷರಾದ ಶ್ರೀಮತಿ ಸುನಂದ ಅಧ್ಯಕ್ಷತೆ ವಹಿಸಿದ್ದರು
ಕಳಂಜ ಗ್ರಾ .ಪಂ ನ ಅಭಿವೃದ್ದಿ ಅಧಿಕಾರಿ ಶ್ರೀಧರ್.ಕೆ.ಆರ್ ಕಾರ್ಯಕ್ರಮ ಉದ್ಘಾಟಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಉಷಾ ಪ್ರಸಾದ್ ರೈ , ಅಯ್ಯನಕಟ್ಟೆ ಸ.ಮಾ.ಹಿ.ಪ್ರಾ ಶಾಲಾ ಮುಖ್ಯಗುರು ಶ್ರೀಮತಿ ಶೀಲಾವತಿ, ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಬೇಬಿ ಕೆ.ಸಿ., ಅಯ್ಯನಕಟ್ಟೆ ಸ.ಮಾ.ಹಿ.ಪ್ರಾ. ಶಾಲಾ ಎಸ್ .ಡಿ.ಎಂ.ಸಿ. ಅಧ್ಯಕ್ಷ ಶ್ರೀ ಸತೀಶ್ಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಬೇಬಿ ಕೆ.ಸಿ ಯವರು ಪೌಷ್ಟಿಕ ಆಹಾರ , ಚುಚ್ಚುಮದ್ದು, ಲಸಿಕೆ , ಗರ್ಬಿಣಿ ಬಾಣಂತಿಯರ ಆರೈಕೆ ಹಾಗೂ ಫೋಷಣಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪೌಷ್ಟಿಕ ಆಹಾರ ತಯಾರಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಉಷಾ ಪ್ರಸಾದ್ ರೈ ಪ್ರಾಸ್ತಾವನೆಗೈದರೆ, ತಂಟೆಪ್ಪಾಡಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಯಶೋದ ಸ್ವಾಗತಿಸಿ, ವಿಷ್ಣುನಗರ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಂಜಿತಾ ವಂದಿಸಿದರು. ಶ್ರೀಮತಿ ಪುಷ್ಪ ಪ್ರಾರ್ಥಿಸಿದರು. ಅಯ್ಯನಕಟ್ಟೆ ಅಂಗನವಾಡಿ ಕಾರ್ಯಕರ್ತೆ ಕು.ದೀಪ್ತಿ ಕಾರ್ಯಕ್ರಮ ನಿರೂಪಿಸಿದರು. ಕೋಟೆಮುಂಡುಗಾರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಜಯ.ಬಿ.ಎಸ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಬಾಲವಿಕಾಸ ಸಮಿತಿ ಅಧ್ಯಕ್ಷರು, ಗುಂಪಿನ ಸದಸ್ಯರು, ಪೋಷಕರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಅಯ್ಯನಕಟ್ಟೆ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮೇಲ್ವಿಚಾರಕಿ ಉಷಾ ಅವರು ತೆಂಗಿನ ಗಿಡ ನೆಡುವ ಮೂಲಕ ಪೌಷ್ಠಿಕ ಕೈತೋಟ ಕ್ಕೆ ಚಾಲನೆ ನೀಡಿದರು.