ಕೆಲವು ತಿಂಗಳ ಹಿಂದಿನಿಂದ ಸುಳ್ಯದಲ್ಲಿ ಸಂಚಲನವನ್ನೇ ಮೂಡಿಸಿದ್ದ ಆಸಿಯ ಇಬ್ರಾಹಿಂ ಖಲೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಸಿಯ ಮತ್ತು ಅವರ ಹಿತೈಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇಬ್ರಾಹಿಂ ಕಲೀಲ್ ಮತ್ತು ಕುಟುಂಬಸ್ಥರ ಬಗ್ಗೆ ಹರಿದಾಡಿಸುತ್ತಿದ್ದ ಲೇಖನ ಮತ್ತು ಆಡಿಯೋ-ವಿಡಿಯೋ ತುಣುಕುಗಳ ಬೆಳವಣಿಗೆಗೆ ಸುಳ್ಯ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕಳೆದ ಕೆಲವು ತಿಂಗಳ ಹಿಂದೆ ಆಸಿಯಾ ಎಂಬ ಮಹಿಳೆ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಎಂಬವರು ನನ್ನನ್ನು ಮತಾಂತರಗೊಳಿಸಿ ಮದುವೆ ಮಾಡಿಕೊಂಡು ಇದೀಗ ನನ್ನನ್ನು ದೂರ ಮಾಡುತ್ತಿದ್ದಾರೆ ಎಂದು ಆರೋಪಿಸಿ ತನಗೆ ನ್ಯಾಯ ಸಿಗಬೇಕೆಂದು ಬೆಂಗಳೂರಿನಿಂದ ಬಂದು ಸುಳ್ಯದಲ್ಲಿ ಹೋರಾಟಕ್ಕೆ ಇಳಿದಿದ್ದರು. ಇದರ ಹಿನ್ನೆಲೆಯಲ್ಲಿ ಇಬ್ರಾಹಿಂ ಖಲೀಲ್ ಹಾಗೂ ಅವರ ಕುಟುಂಬಸ್ಥರನ್ನು ದೂರಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಚಿತ್ರಗಳನ್ನು ಮತ್ತು ತನಗೆ ನ್ಯಾಯ ಸಿಗಬೇಕೆಂದು ಲೇಖನಗಳನ್ನು, ವಾಟ್ಸಾಪ್ನಲ್ಲಿ ಆಡಿಯೋ ತುಣುಕುಗಳನ್ನು ಹರಿ ಬಿಡುತ್ತಿರುವ ದೃಶ್ಯಗಳು ಹಲವು ದಿನಗಳಿಂದ ಕಂಡುಬರುತ್ತಿದ್ದವು. ದಿನಗಳು ಕಳೆದಂತೆ ಇವರೊಂದಿಗೆ ಆಸಿಯಾ ರವರ ಹಿತೈಷಿಗಳು ಮತ್ತು ಸ್ನೇಹಿತರು ಸೇರಿಕೊಂಡಿದ್ದರು. ಇದರಿಂದ ಇಬ್ರಾಹಿಂ ಕಲೀಲ್ ಕಟ್ಟೆಕಾರ್ ರವರ ತಂದೆ ಹಾಜಿ ಅಬ್ದುಲ್ಲಾ ಕಟ್ಟೆಕಾರ್ ರವರು ವಿನಾಕಾರಣ ಯಾವುದೇ ಆಧಾರಗಳು ದಾಖಲೆಗಳು ಇಲ್ಲದೆ ನನ್ನ ಮಗ ಇಬ್ರಾಹಿಂ ಖಲೀಲ್ ರವರ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಕುಟುಂಬದ ಬಗ್ಗೆ ಫೇಸ್ಬುಕ್ ವಾಟ್ಸ್ಅಪ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಲೇಖನಗಳನ್ನು ವಿಡಿಯೋ ಚಿತ್ರೀಕರಣ,ವಾಯಿಸ್ ಮೇಸೇಜ್ ಗಳನ್ನು ಹರಿದಾಡಿಸಿ ಮಾನಸಿಕವಾಗಿ ತೊಂದರೆಯನ್ನು ನೀಡುತ್ತಿದ್ದಾರೆ. ಅದರಿಂದ ಇವರಿಂದ ನಮ್ಮ ಕುಟುಂಬಕ್ಕೆ ಮಾನಸಿಕವಾಗಿ ತೊಂದರೆಯಾಗಿದ್ದು ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಅಬ್ದುಲ್ಲಾ ಕಟ್ಟೆಕಾರ್ ರವರು ಕಳೆದ ಒಂದು ತಿಂಗಳ ಹಿಂದೆ ಸುಳ್ಯ ನ್ಯಾಯಾಲಯದ ಮೊರೆಹೋಗಿದ್ದರು. ಇದೀಗ ಆಸಿಯ ಹಾಗೂ ಅವರ ಸ್ನೇಹಿತರು , ಅವರ ಸಹಾಯಿಗಳು,ಮತ್ತು ಹಿತೈಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ಬುಕ್, ವಾಟ್ಸಪ್, ಟ್ವಿಟರ್ ಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಲೇಖನಗಳನ್ನು, ಆಡಿಯೋ,ವಿಡಿಯೋ ಚಿತ್ರೀಕರಣಗಳನ್ನು, ಪ್ರಸಾರ ಮಾಡದಂತೆ, ದೂರು ನಂ os 49/2020. ಮಧ್ಯಂತರ ಅರ್ಜಿ 2/2020 ರ ಸಿವಿಲ್ ಪ್ರೊಸೀಜರ್ 151 ರ ಪ್ರಕಾರ ಸೆಪ್ಟೆಂಬರ್ 21ರಂದು ಸುಳ್ಯ ನ್ಯಾಯಾಧೀಶರು ತಡೆಯಾಜ್ಞೆ ಆದೇಶವನ್ನು ಹೊರಡಿಸಿರುತ್ತಾರೆ ಎಂದು ತಿಳಿದುಬಂದಿದೆ. ಸುಳ್ಯದ ಖ್ಯಾತ ವಕೀಲ ಮಹೇಶ್ ಎನ್ ರವರು ಅಬ್ದುಲ್ಲಾ ರವರ ಪರ ವಾದಿಸಿದ್ದರು.
- Thursday
- November 21st, 2024