ಪನತ್ತಡಿ ಗ್ರಾಮಪಂಚಾಯತ್ ವತಿಯಿಂದ ಕಲ್ಲಪ್ಪಳ್ಳಿಯಲ್ಲಿ, ವಿವಿಧ ಕಾಮಗಾರಿ ಗಳ ಉದ್ಘಾಟನಾ ಸಮಾರಂಭ ಕಲ್ಲಪ್ಪಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳ ರಾಜ್ಯ ಸರಕಾರದ ಕಂದಾಯ ಸಚಿವರಾದ ಚಂದ್ರಶೇಖರವರು ನೆರವೇರಿಸಿದರು.
1,ಪಾಣತ್ತೂರು-ಕಲ್ಲಪ್ಪಳ್ಳಿ ರಸ್ತೆಯ 3ಕಿಮೀ ನಿಂದ 6ಕಿಮೀ ವರೇಗೆ 3ಕೋಟಿ ರೂಪಾಯಿ ಗಳಲ್ಲಿ ಪೂರ್ತಿಗೊಂಡ ರಸ್ತೆಯ ಉದ್ಘಾಟನೆ.
2,ಊಡಿಯಾರದಲ್ಲಿ 68ಲಕ್ಷ ರೂಪಾಯಿ ಅನುದಾನಲ್ಲಿ ಪೂರ್ತಿ ಗೊಂಡ ವೆಂಟಿಲೇಟರ್ ಕಂ ಬ್ರಿಡ್ಜ್ ನ ಉದ್ಘಾಟನೆ.
3,ಕಮ್ಮಾಡಿ ರಸ್ತೆಯ ಹಂದಿ ಪಾರೆ ಹೊಳೆಗೆ 98.75 ಲಕ್ಷ ರೂಪಾಯಿಗಳ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ.
4,ಪಾಣತ್ತೂರು-ಕಲ್ಲಪ್ಪಳ್ಳಿ ರಸ್ತೆಯ ಉಳಿದ 6ಕಿಮೀ ನಿಂದ 10ಕಿಮೀ ವರೇಗೆ 3.74ಕೋಟಿ ರೂಪಾಯಿ ಗಳ ಕಾಮಗಾರಿಗೆ ಶಂಕುಸ್ಥಾಪನೆ.
ಹೀಗೆ 8.50ಕೋಟಿ ರೂಪಾಯಿಗಳ ಪದ್ಧತಿಯ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.
ಅಲ್ಲದೇ ಕಮ್ಮಾಡಿ ರಸ್ತೆ ಯ ಕಾಮಗಾರಿಗೆ ಈಗಾಗಲೇ 5ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮತಿ ದೊರಕಿದ್ದು ಇದರ ಟೆಂಡರ್ ಪ್ರಕ್ರಿಯೆಯೆ ಸಹ ಬೇಗನೇ ನಡೆಯಲಿದೆ. ಎಂದು ಹೇಳಿದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಪನತ್ತಡಿ ಗ್ರಾಮಪಂಚಾಯತಿನ ಅಧ್ಯಕ್ಷರಾದ ಶ್ರೀ ಪಿ ಜಿ ಮೋಹನ್ ರವರು ನಿರ್ವಿಸಿದರು. ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಶ್ರೀ ಪಿ ರಾಜನ್ ವಿಶಿಷ್ಟ ಆಹ್ವಾನಿತರಾಗಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಪದ್ಮಾವತಿ. ಶ್ರೀ ಯಂ ನಾರಾಯಣ, ಪನತ್ತಡಿ ಗ್ರಾಮಪಂಚಾಯ ತಿನ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಯಂ ಸಿ ಮಾದವ, ಶ್ರೀಮತಿ ರಜನೀ ದೇವಿ, ಶ್ರೀ ಪಿ ತಂಬಾನ್, ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀಮತಿ ಲತಾ ಅರವಿಂದನ್, ಕುಟುಂಬ ಶ್ರೀ, ಸಿಡಿಯಸ್ ಶ್ರೀಮತಿ ಮಾಧವಿ ರಾಜನ್, ವಿವಿಧ ರಾಜಕೀಯ ಪ್ರತಿನಿಧಿಗಳಾದ ಬಿ ಮೋಹನ್ ಕುಮಾರ್, ಕೆಜೆ ಜೇಮ್ಸ್, ಮತ್ತು ವಾರ್ಡಿನ ವಿಕಸನ ಸಮಿತಿಯ ಕನ್ವೀನರ್ ಅರುಣ್ ರಂಗತ್ತಮಲೆ, ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಕ್ಕೆ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಹೇಮಾಂಬಿಕ ಸ್ವಾಗತಿಸಿ, ಪಂಚಾಯತ್ ಸದಸ್ಯೆ ಶ್ರೀಮತಿ ನಳಿನಾಕ್ಷಿ ದಾಮೋದರ ವಂದಿಸಿದರು.