Ad Widget

ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ- ಬೆಳ್ಳಾರೆ ಹಾಗೂ ಸವಣೂರಿನ ಇಬ್ಬರ ಬಂಧನ- ಜಾಮೀನು – 9250 ಕೆಜಿ ಅಕ್ಕಿ ಸಮೇತ ಲಾರಿ ವಶಕ್ಕೆ

ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ಸೆ.20ರಂದು ನಡೆದಿದೆ. ಇವರಿಬ್ಬರಿಗೂ ಇಂದು ಜಾಮೀನು ದೊರೆತಿದೆ ಎಂದು ತಿಳಿದುಬಂದಿದೆ.

. . . . . .

ಲಾರಿ ಚಾಲಕ ಬೆಳ್ಳಾರೆ ಗ್ರಾಮ ಕಾವಿನಮೂಲೆ ಅಬ್ದುಲ್ ಖಾದರ್‌ರವರ ಪುತ್ರ ಖಲಂದರ್(31.ವ) ಹಾಗೂ ಸವಣೂರು ಗ್ರಾಮದ ಮಾಂತೂರು ಅಬ್ದುಲ್ಲಾರವರ ಪುತ್ರ ಝಕಾರಿಯಾ(40.ವ) ಬಂಧಿತ ಆರೋಪಿಗಳು. ನಗರ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್ ಹಾಗೂ ಸಿಬಂದಿಗಳು ಮಾಣಿ-ಮೈಸೂರು ಹೆದ್ದಾರಿಯ ಪೋಳ್ಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬಂದ ಸ್ವರಾಜ್ ಮಜ್ದಾ ಲಾರಿ(ಕೆಎ21:ಸಿ 4647)ಯನ್ನು ತಡೆದು ತಪಾಸಣೆ ನಡೆಸಿದಾಗ ಗೋಣಿ ಚೀಲದಲ್ಲಿ ತುಂಬಿಸಿ ಯಾವುದೇ ದಾಖಲೆಯಿಲ್ಲದ ಲಾರಿಯಲ್ಲಿ ಅಕ್ಕಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.ಅಕ್ಕಿಯನ್ನು ಪುತ್ತೂರಿನ ಕಟ್ಟಡವೊಂದರಿಂದ ತುಂಬಿಸಿ ಮಂಗಳೂರಿಗೆ ಸಾಗಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿರುವುದಾಗಿ ಪೊಲಿಸರು ಹೇಳಿದ್ದಾರೆ. ದಾಖಲೆಯಿಲ್ಲದ ಅಕ್ಕಿ ಸಾಗಾಟವಾಗುತ್ತಿರುವ ಕುರಿತು ತಹಶೀಲ್ದಾರ್‌ರವರಿಗೆ ಮಾಹಿತಿ ನೀಡಲಾಗಿದ್ದು ಆಹಾರ ನಿರೀಕ್ಷಕಿ ಸರಸ್ವತಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಲಾರಿಯಲ್ಲಿ ಗೋಣಿಚೀಲದಲ್ಲಿ ತುಂಬಿಸಿಡಲಾಗಿದ್ದ ೯೨೫೦ ಕೆ.ಜಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಕೊಂಡಿರುವ ಅಕ್ಕಿಯ ಬೆಲೆ ಸುಮಾರು ರೂ.೨ ಲಕ್ಷ ಎಂದು ಅಂದಾಜಿಸಲಾಗಿದೆ. ಆಹಾರ ನಿರೀಕ್ಷಕಿ ಸರಸ್ವತಿಯವರ ದೂರಿನ ಮೇರೆಗೆ ಆರೋಪಿಗಳ ವಿರುದ್ದ ಕಲಂ ೩,೭ ಇಸಿ ಆಕ್ಟ್ ೧೯೫೫ರಡಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಎ.ಎಸ್ಪಿ ಲಕನ್ ಸಿಂಗ್ ಯಾದವ್ ಅವರ ನಿರ್ದೇಶನದಂತೆ, ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಗೋಪಾಲ ನಾಕ್ ಅವರ ಸೂಚನೆಯಂತೆ ಎಸ್.ಐ ಜಂಬೂರಾಜ್ ಮಹಾಜನ್ ಅವರ ನೇತ್ರತ್ವದಲ್ಲಿ ಎ.ಎಸ್. ಐ ಲೋಕನಾಥ, ಸಿಬ್ಬಂದಿಗಳಾದ ಜಯರಾಮ, ಸುಬ್ರಹ್ಮಣ್ಯ, ಶರಣಪ್ಪ ಪಾಟೀಲ್, ಶ್ರೀಶೈಲ ಕಾರ್‍ಯಾಚರಣೆಯಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!