Ad Widget

ಅಮರ ಸಂಘಟನಾ ಸಮಿತಿ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮ

ಅಮರ ಸಂಘಟನಾ ಸಮಿತಿ ಅಮರ ಮುಡ್ನೂರು ಮತ್ತು ಪಡ್ನೂರು ಇದರ ಆಶ್ರಯದಲ್ಲಿ ಗೋವುಪ್ರೇಮಿಗಳ ಸಹಕಾರದೊಂದಿಗೆ, ಗೋವಿಗಾಗಿ ಮೇವು ಎಂಬ ವಿಶೇಷ ಕಾರ್ಯಕ್ರಮ ವನ್ನು ಶ್ರೀ ಕ್ಷೇತ್ರ ಹನುಮಗಿರಿ ಈಶ್ವರಮಂಗಲ ದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ದೊಡ್ಡಿಹಿತ್ಲು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ಇದರ ಅಧ್ಯಕ್ಷರಾದ ಡಾ| ಕೃಷ್ಣಪ್ರಸನ್ನ ನೆರವೇರಿಸಿದರು. ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ನನ್ಯ ಅಚ್ಚುತ ಮೂಡೆತ್ತಾಯ ಅವರು ಧಾರ್ಮಿಕ ಉಪನ್ಯಾಸ ಮಾಡಿದರು. ವೇದಿಕೆಯಲ್ಲಿ ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಅನಿಲ್ ಪೂಜಾರಿಮನೆ, ಶಿವರಾಮ.ಪಿ ಈಶ್ವರಮಂಗಲ, ಪ್ರದೀಪ್ ಬೊಳ್ಳೂರು ಸ್ಥಾಪಕಾಧ್ಯಕ್ಷರು ಅಮರ ಸಂಘಟನಾ ಸಮಿತಿ, ತಾಲೂಕು ಜಲ,ಪರಿಸರ ಸಂರಕ್ಷಣಾ(ಗತಿವಿಧಿ) ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ, ಸುಳ್ಯ ತಾಲೂಕು ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಗೋಶಾಲೆಗೆ ಸುಮಾರು 10000/- ಮೌಲ್ಯದ ಮೇವನ್ನು ಹಸ್ತಾಂತರಿಸಲಾಯಿತು.
ಸಂಘಟನೆಯ ಸದಸ್ಯರಾದ ಕು|ಸಾಯಿಶೃತಿ ಕಾರ್ಯಕ್ರಮ ನಿರೂಪಿಸಿದರು, ಸಂಘಟನೆಯ ಕಾರ್ಯದರ್ಶಿ ಶಶಿಕಾಂತ್ ಮಿತ್ತೂರು ಸ್ವಾಗತಿಸಿ, ಜಯಪ್ರಸಾದ್ ಸಂಕೇಶ ವಂದಿಸಿದರು. ಕು| ಸುಶ್ಮಿತಾ ಕಡಪಳ ಪಾರ್ಥನೆ ನೆರವರೆಸಿದರು, ಶ್ರೀಮತಿ ರಶ್ಮಿ ರಜನಿಕಾಂತ್ ಹೂಗುಚ್ಛ ನೀಡಿ, ಹಾಗೂ ಚೇತನ್ ಕೊಯಿಂಗುಳಿ ಮತ್ತು ಕಿರಣ್ ಕೊಂಡೆಬಾಯಿ ವಾಹನ ಸೌಲಭ್ಯ ನೀಡಿ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading