ಭಾರತೀಯ ಜನತಾ ಪಾರ್ಟಿ, ಗ್ರಾಮ ಸಮಿತಿ ಪೆರುವಾಜೆ ಇದರ ವತಿಯಿಂದ ಪ್ರಧಾನಮಂತ್ರಿ ಪ್ರಜಾ ಸುರಕ್ಷಾ ಯೋಜನೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಉಚಿತ ನೋಂದಣಿ ಶಿಬಿರವು ಸೆ.20 ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ಜರುಗಿತು. ಶಿಬಿರವನ್ನು ನಂದಿ ಅಸೋಸಿಯೇಟ್ಸ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಶ್ರೀ ಲಕ್ಷ್ಮೀನಾರಾಯಣ ಐವರ್ನಾಡು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎಸ್.ಅಂಗಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಸಂಕ್ಷಿಪ್ತ ಮಾಹಿತಿ ನೀಡಿದರು. ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿ ಸಾಂಕೇತಿಕವಾಗಿ ಕಾರ್ಡ್ ವಿತರಿಸಿದರು. ವೇದಿಕೆಯಲ್ಲಿ ಭಾ.ಜ.ಪಾ. ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಸುಭೋದ್ ಶೆಟ್ಟಿ ಮೇನಾಲ, ಪೆರುವಾಜೆ ವಾರ್ಡ್ ಅಧ್ಯಕ್ಷರಾದ ರಮೇಶ್ ಮಠತ್ತಡ್ಕ, ಮುಕ್ಕೂರು ವಾರ್ಡ್ ಅಧ್ಯಕ್ಷರಾದ ರೂಪಾನಂದ, ಮುರ್ಕೆತ್ತಿ ವಾರ್ಡ್ ಅಧ್ಯಕ್ಷರಾದ ಚಿದಾನಂದ ಬಜ, ಪ್ರಮುಖರಾದ ಪದ್ಮನಾಭ ಶೆಟ್ಟಿ ಪೆರುವಾಜೆ, ಉಮೇಶ್.ಕೆ.ಎಂ.ಬಿ, ನಾರಾಯಣ ಕೊಂಡೆಪ್ಪಾಡಿ, ಯತೀಶ್ ನಾಗನಮಜಲು ಹಾಗೂ ಜಯಪ್ರಕಾಶ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ
ಕು|ಶ್ರುತಕೀರ್ತಿ ಪ್ರಾರ್ಥಿಸಿ, ನಾರಾಯಣ ಕೊಂಡೆಪ್ಪಾಡಿ ಸ್ವಾಗತಿಸಿ, ಶಿವಪ್ರಸಾದ್ ಪೆರುವಾಜೆ ನಿರೂಪಿಸಿದರು. ಪ್ರಮುಖರಾದ ಉಮೇಶ್ ಕೆ.ಎಂ.ಬಿ ವಂದಿಸಿದರು.
- Thursday
- November 21st, 2024