
ಹಿಂದೂ ಜಾಗರಣಾ ವೇದಿಕೆ ಸುಳ್ಯ ತಾಲೂಕು, ಜಾಲ್ಸೂರು ವಲಯ ಮಂಡೆಕೋಲು ಕನ್ಯಾನ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಶ್ರೀ ಗುರುರಾಘವೇಂದ್ರ ಭಜನಾ ಮಂದಿರ ಗುರುನಗರ ಕನ್ಯಾನ ಮಂಡೆಕೋಲು ಇಲ್ಲಿ ಇಂದು ನಡೆಯಿತು.
ಹಿಂದೂ ಜಾಗರಣ ವೇಧಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಮಹೇಶ್ ಉಗ್ರಾಣಿಮನೆ ಇವರು ಪಧಾಧಿಕಾರಿಗಳ ಜವಾಬ್ದಾರಿ ಘೋಷಣೆ ಮಾಡಿದರು.
ಜನಜಾಗೃತಿ ವೇದಿಕೆ ಸುಳ್ಯ ವಲಯಾಧ್ಯಕ್ಷ ಸುರೇಶ್ ಕಣೆಮರಡ್ಕ ಸಮಿತಿ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ಮಂಡೆಕೋಲು ಸೊಸೈಟಿ ಮಾಜಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಪ್ರಾಸ್ತಾವಿಕ ಮಾತಾಡಿದರು. ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಕಾರ್ಯದರ್ಶಿ ಗಣೇಶ್ ಬೊಳುಗಲ್ಲು, ಗುರುರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷರಾದ ಶಿವಪ್ರಸಾದ್ ಪಟೇಲ್ ಮನೆ, ಮಂಡೆಕೋಲು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಾಲ್ಸೂರು ವಲಯ ಕಾರ್ಯದರ್ಶಿ ರಾಕೇಶ್ ಕಣೆಮರಡ್ಕ ಸ್ವಾಗತಿಸಿ, ವಂದಿಸಿದರು.
ಹಿಂದೂ ಜಾಗರಣಾ ವೇದಿಕೆ ಕನ್ಯಾನ ಘಟಕದ ಗೌರವಾಧ್ಯಕ್ಷರಾಗಿ ಜನಾರ್ಧನ ಮಿತ್ತಿಲ, ಅಧ್ಯಕ್ಷರಾಗಿ ಬಾಲಚಂದ್ರ ಕನ್ಯಾನ, ಉಪಾಧ್ಯಕ್ಷರಾಗಿ ಮುತ್ತಪ್ಪ ಬಾಯಿಕೋಡಿಮೂಲೆ,ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕನ್ಯಾನ, ಸಹ ಕಾರ್ಯದರ್ಶಿ ಗಿರೀಶ್ ಬಾಯಿಕೋಡಿಮೂಲೆ, ನವೀನ್ ಕನ್ಯಾನ, ಸಂಪರ್ಕ ಪ್ರಮುಖ್ ಸುಜಿತ್ ಬಾಯಿಕೋಡಿಮೂಲೆ, ಪ್ರಚಾರ ಪ್ರಮುಖ್ ಮನೋಜ್ ಬಾಯಿಕೊಡಿಮೂಲೆ, ನಿಧಿ ಪ್ರಮುಖ್ ದಿನೇಶ್ ಬಾಯಿಕೋಡಿಮೂಲೆ, ಮಾತೃ ಸುರಕ್ಷಾ ಪ್ರವೀಣ್ ಕನ್ಯಾನ, ಹಿಂದೂ ಯುವ ವಾಹಿನಿ ಶಶಾಂಕ್ ಕನ್ಯಾನ, ಅಜಿತ್ ಬಾಯಿಕೋಡಿಮೂಲೆ ಅವರನ್ನು ಆಯ್ಕೆ ಮಾಡಲಾಗಿದೆ.