
ಬಾಳಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ ಪಂಜಿಗಾರು ಅಸೌಖ್ಯದಿಂದ ಸೆ. 19 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಶ್ರೀಮತಿ ಪೂರ್ಣಿಮಾ, ಪುತ್ರ ಕಾರ್ತಿಕ್, ಸಹೋದರರಾದ ಶ್ರೀಧರ ಪಂಜಿಗಾರು, ಶಂಕರನಾರಾಯಣ, ಭಾಸ್ಕರ, ಸಹೋದರಿಯರಾದ ಶ್ರೀಮತಿ ಸುಲೋಚನಾ, ಶ್ರೀಮತಿ ಅತುಲಾ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.