ಸುಳ್ಯ ಅರಂಬೂರು ಬಳಿ ಮಾಣಿ-ಮೈಸೂರು ರಸ್ತೆಯ ಬದಿ ಒಂದು ಬಡಕುಟುಂಬ ವಾಸಿಸುತ್ತಿದ್ದು ಮನೆಯಲ್ಲಿ ತಾಯಿ ಮತ್ತು ಒಬ್ಬ ಅಸ್ವಸ್ಥ ಮಗಳು ಮಾತ್ರ ಜೀವನ ಸಾಗಿಸುತ್ತಿದ್ದಾರೆ. ಸೆಪ್ಟೆಂಬರ್ 19ರಂದು ಮನೆಯಲ್ಲಿ ಇದ್ದ ಮಾನಸಿಕವಾಗಿ ಅಸ್ವಸ್ಥ ಗೊಂಡಿರುವ 17 ವರ್ಷದ ಬಾಲಕಿ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದರು. ನಂತರ ಮನೆಯವರು ಮತ್ತು ಸ್ಥಳೀಯರು ಹುಡುಕಾಡಿದರು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಕೆಲ ಗಂಟೆಗಳ ನಂತರ ಬಾಲಕಿ ರಸ್ತೆಯ ಬಳಿ ಕಂಡುಬಂದಿದ್ದು ಅವಳನ್ನು ವಿಚಾರಿಸಿದಾಗ ಯಾರೋ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಬಾಲಕಿ ಎಂಬಿ ಫೌಂಡೇಶನ್ ಇದರ ಸಾಂದೀಪನಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು ವಿಷಯ ತಿಳಿದ ಎಂ ಬಿ ಸದಾಶಿವ, ಮಹಿಳಾ ಸಮಾಜದ ಅಧ್ಯಕ್ಷೆ ಹರಿಣಿ ಸದಾಶಿವರವರು ಕೂಡಲೇ ಸ್ಪಂದಿಸಿ ತಮ್ಮ ಶಾಲಾ ಶಿಕ್ಷಕರೊಂದಿಗೆ ಬಾಲಕಿಯ ಮನೆಗೆ ಭೇಟಿ ನೀಡಿ ವಿವರವನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಕಿರುಕುಳ ನೀಡಿದ್ದಾರೆ ಎನ್ನಲಾಗಿರುವ ವ್ಯಕ್ತಿಯನ್ನು ಕೂಡಲೇ ಪೊಲೀಸರು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
- Thursday
- November 21st, 2024