
ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದೇವಚಳ್ಳ ಇದರ ಮೂಲಕ ಸೇವಾಜೆ ಅಂಗನವಾಡಿ ಕೇಂದ್ರದಲ್ಲಿ ಸಂಜೀವಿನಿ ಸಂಘದ ಸದಸ್ಯರಿಂದ ಪೌಷ್ಟಿಕ ಆಹಾರ ಬೆಳೆಗಳ ಕೈತೋಟ ರಚನೆ ಮಾಡಲಾಯಿತು. ಸಂಜೀವಿನಿ ಸಂಘದ ಸದಸ್ಯರಾದ ಭಾರತಿ, ಪ್ರೇಮ, ಗೌರಿ, ಪ್ರಮೀಳಾ, ಗೀತಾ, ಅಂಗನವಾಡಿ ಕಾರ್ಯಕರ್ತೆ ರೇಣುಕಾ ಗುಡ್ಡನಮನೆ, ದೇವಚಳ್ಳ ಗ್ರಾ.ಪಂ.ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.