
ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಕರ್ನಾಟಕದಲ್ಲಿ ಸ್ಥಾಪಿತಗೊಂಡು ಮೂವತ್ತೊಂದು ವರುಷಗಳು ಪೂರ್ತಿಕರಿಸಿದೆ. 2020 ಸೆಪ್ಟಂಬರ್ 19ರಂದು ಮೂವತ್ತೆರಡನೇ ವರುಷಕ್ಕೆ ಕಾಲಿರಿಸುತ್ತಿದೆ. ಮೂರು ದಶಕಗಳಲ್ಲಿ ರಾಜ್ಯದುದ್ದಕ್ಕೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಮೂಹಿಕ ಕ್ಷೇತ್ರಗಳಲ್ಲಿ ಎಸ್ಸೆಸ್ಸೆಫ್ ನಡೆಸಿದೆ. ಧ್ವಜ ದಿನದ ಅಂಗವಾಗಿ ಸುಳ್ಯ ಡಿವಿಷನ್ ಸಮಿತಿಯಿಂದ ಸೆಪ್ಟಂಬರ್ 19ರಂದು ವಿವಿಧ ಕಾರ್ಯಕ್ರಮಗಳು ಜರಗಲಿದೆ. ಬೆಳಗ್ಗೆ ಡಿವಿಷನ್ ಸಮಿತಿ ಅಧೀನದ 27 ಶಾಖೆಗಳಲ್ಲಿ ಧ್ವಜಾರೋಹಣ ಹಾಗೂ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಸುಳ್ಯ ನಗರ ಪಂಚಾಯತ್ ಪೌರ ಕಾರ್ಮಿಕರಿಗೆ ಆಹಾರ ವಿತರಣೆ, ಮಧ್ಯಾಹ್ನ 3 ಗಂಟೆಗೆ ಇತ್ತೀಚೆಗೆ ನಮ್ಮನ್ನಗಲಿದ ಸುಳ್ಯದ ಹಿರಿಯ ಉಮರಾ ನಾಯಕರ ಮನೆಗಳಿಗೆ ಭೇಟಿ, ಸಂಜೆ 4 ಗಂಟೆಗೆ ಖಲಂದರ್ ಶಾಫಿ ಮಾಂಬ್ಳಿ, ಸತ್ತಾರ್ ಸಂಗಂ ಸಮೇತರ ಖಬರ್ ಝಿಯಾರತ್, ಸಂಜೆ 4:30ಕ್ಕೆ ದಅವಾ ಕಾನ್ಫರನ್ಸ್, ರಾತ್ರಿ 9ಕ್ಕೆ ನೀಡ್ 2020 ಕಾರ್ಯಕ್ರಮಗಳು ನಡೆಯಲಿದೆ.
ವಿವಿಧ ಕಾರ್ಯಕ್ರಮಗಳಿಗೆ ಕರ್ನಾಟಕ ಎಸ್ಸೆಸ್ಸೆಫ್ ಸ್ಥಾಪಕ ಅಧ್ಯಕ್ಷ ಎ.ಬಿ ಹಸನುಲ್ ಫೈಝಿ, ದ.ಕ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ, ಎಸ್ಸೆಸ್ಸೆಫ್ ದ.ಕ ಈಸ್ಟ್ ಝೋನ್ ಅಧ್ಯಕ್ಷ ಅಯ್ಯೂಬ್ ಮಹ್ಳರಿ ಕಾವಲ್ಕಟ್ಟೆ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಇಬ್ರಾಹೀಂ ಅಂಜದಿ ಮಂಡೆಕೋಲು ನೇತೃತ್ವ ನೀಡಲಿದ್ದಾರೆಂದು ಸಂಘಟಕರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.