
ಸುಳ್ಯ ಎಸ್ ವೈ ಎಸ್ ಸಂಘಟನೆಯ ಮುಖಂಡರು, ಸಮಾಜ ಸೇವಕರು , ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿ ಇದರ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಹಾಜಿ ಮೊಹಿದ್ದಿನ್ ಶಾಂತಿನಗರ ಇವರು ಕೆಲವು ಕಾಲದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ವಿಚಾರಣೆಗಾಗಿ ಸೆಪ್ಟೆಂಬರ್ 17ರಂದು ಶಾಂತಿನಗರ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಎಸ್ ವೈ ಎಸ್ ಸಮಿತಿ ಅಧ್ಯಕ್ಷ ಜಿಎಂ ಕಾಮಿಲ್ ಸಖಾಫಿ, ಮುನಿರ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಶೀದ್ ಝೈನಿ, ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕಿನಾರ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಸುಳ್ಯ ಎಸ್ಎಸ್ ಎಫ್ ಸಮಿತಿ ಸದಸ್ಯ ನೌಶಾದ್ ಕೆರೆಮೂಲೆ, ಮೊದಲಾದವರು ಉಪಸ್ಥಿತರಿದ್ದರು.