ಮಲೆನಾಡ ಚಾರಿಚೇಬಲ್ ಟ್ರಸ್ಟ್ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಆಶ್ರಯದಲ್ಲಿ ಸಜ್ಜನ ಸಿರಿ ಮಲೆನಾಡ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ.೧೮ರಂದು ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆಯಿತು. ಮಲೆನಾಡ ಚಾರಿಟೇಬಲ್ ಟ್ರಸ್ಟ್ ಇದರ ಗೌರವಾಧ್ಯಕ್ಷ ಕೆ.ಎಂ ಮುಸ್ತಾಫ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆ.ವಿ.ಜಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎನ್.ಎ ಜ್ಞಾನೇಶ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ಸರಕಾರ ಇದರ ನಿವೃತ್ತ ಅಧಿಕಾರಿ ಇಬ್ರಾಹಿಂ ಗೂನಡ್ಕ, ಸುಳ್ಯ ಪೊಲೀಸ್ ಉಪನಿರೀಕ್ಷಕ ಹರೀಶ್ ಎಂ.ಆರ್, ಕ.ರಾ.ಸ.ಸೌ.ಸಂಘದ ಅಧ್ಯಕ್ಷ ತೀರ್ಥರಾಮ, ಸಿ.ಡಿ.ಪಿ.ಓ ರಶ್ಮಿ ಅಶೋಕ್, ಸುಳ್ಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಹಮೀದ್ ಜನತಾ ಮಲೆನಾಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್, ಇನ್ನರ್‌ವ್ಹೀಲ್ ಕ್ಲಬ್ ಸದಸ್ಯ ಲತಾ, ಸುಳ್ಯ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಮಂಜುನಾಥ ಬಳ್ಳಾರಿ ಮೊದಲಾದವರು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಆಶ್ರಯದಲ್ಲಿ ನೀಡಲ್ಪಡುವ ಸಜ್ಜನ ಸಿರಿ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹಾದೇವ್‌ರವರಿಗೆ ನೀಡಿ ಗೌರವಿಸಲಾಯಿತು. ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವರ್ಷಾಂಪ್ರತಿ ನೀಡಲ್ಪಡುವ ಮಲೆನಾಡ ಸಿರಿ ಪ್ರಶಸ್ತಿ ನಿವೃತ್ತ ಶಿಕ್ಷಕಿ ತೀರ್ಥಕುಮಾರಿ, ಪ್ರೌಢಶಾಲಾ ಶಿಕ್ಷಕ ಗಿರೀಶ್ ಕುಮಾರ್, ಸಮಾನ್ವಯ ಶಿಕ್ಷಕಿ ಕೃತಿಕಾ ಹಾಗೂ ಈ ಭಾರಿಯ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು ಕಣ್ಣಿನ ದೃಷ್ಠಿಯ ವಿಕಲಚೇತನಾಗಿರುವ ಸಿಂಚನ್ ಎಸ್‌ರವರನ್ನು ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಹಲವಾರು ಸಮಾಜದ ಗಣ್ಯ ವ್ಯಕ್ತಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘಟಕರಾದ ಸಿದ್ಧೀಕ್ ಕೊಕ್ಕೋ, ರಹೀಮ್ ಬೀಜದಕಟ್ಟೆ, ಸಂಶುದ್ಧೀನ್ ಕೆ.ಬಿ ಕಾರ್ಯಕ್ರಮ ಸಂಯೋಜಕ ಶರೀಫ್ ಜಟ್ಟಿಪಳ್ಳ, ಶಹೀದ್ ಪಾರೆ, ರಫೀಕ್ ಚೆಂಗಳ, ಶಿಹಾಬ್ ಕೇರ್ಪಳ, ಶಾಝೀಲ್ ಕುಂಬ್ಳೆ, ಶಫೀಕ್ ಹಳೆಗೇಟು ಮೊದಲಾದವರು ಸಹಕರಿಸಿದರು. ವಿಕಲಚೇತನ ಮಕ್ಕಳ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿ, ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ರಫೀಕ್ ಚಂಗಳ ವಂದಿಸಿದರು
- Friday
- November 1st, 2024