ಪೊಲೀಸ್ ಇಲಾಖೆಯಿಂದ ಪ್ರತೀ ಠಾಣೆಗಳಿಗೆ ಸರ್ಕಲ್ ಇನ್ಸ್ಪೆಕ್ಟರ್ ಠಾಣಾಧಿಕಾರಿ ಆಗುವ ನಿಟ್ಟಿನಲ್ಲಿ, ಬೆಳ್ಳಾರೆ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಕಡಬ ವೃತ್ತಕ್ಕೆ ಸೇರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈಗಾಗಲೇ ಸುಳ್ಯ ವೃತ್ತ ದ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದ ಕಾರಣ ಬೆಳ್ಳಾರೆ ಹಾಗೂ ಸ್ಥಳೀಯ ಗ್ರಾಮದ ಜನತೆಗೆ ಕಾನೂನು ಸುವ್ಯವಸ್ಥೆಯ ವಿಷಯಗಳಲ್ಲಿ ತುಂಬಾ ಅನುಕೂಲವಾಗುತ್ತಿತ್ತು. ಆದರೆ ಇದೀಗ ಬೆಳ್ಳಾರೆ ಠಾಣೆಯನ್ನು ಸುಳ್ಯದಿಂದ ವಿಭಜಿಸಿ ಕಡಬಕ್ಕೆ ಸೇರ್ಪಡಿಸುವುದರಿಂದ ಜನತೆಗೆ ತುಂಬಾ ಸಮಸ್ಯೆ ಎದುರಾಗಲಿದೆ. ಪ್ರತಿಯೊಂದು ಪೊಲೀಸ್ ಇಲಾಖೆ ಕೆಲಸಕಾರ್ಯಗಳಿಗೆ ಬೆಳ್ಳಾರೆಯಿಂದ ಸುಮಾರು ಐವತ್ತು ಕಿಲೋಮೀಟರ್ ದೂರ ಚಲಿಸಿ ಕಡಬ ಪ್ರದೇಶವನ್ನು ಅವಲಂಬಿಸಿ ಕೊಳ್ಳಬೇಕಾಗುತ್ತದೆ. ಇದರಿಂದ ಬೆಳ್ಳಾರೆ,ಪೆರುವಾಜೆ, ಪೆರ್ಲಂಪಾಡಿ, ಅಮರ ಪಡ್ನೂರು, ಅಮರ ಮುಡ್ನೂರು, ಕಳಂಜ, ಪಾಲ್ತಾಡಿ, ಬಾಳಿಲ, ಮುಂತಾದ ಗ್ರಾಮಗಳ ಜನತೆ ಸಂಕಷ್ಟಕ್ಕೆ ಈಡಾಗಲಿದ್ದಾರೆ. ಈ ರೀತಿಯ ನಿರ್ಣಯದ ಮೊದಲು ಸ್ಥಳೀಯ ಜನತೆಯ ಅಭಿಪ್ರಾಯಗಳನ್ನು ಸಂಗ್ರಹಿಸದೇ ಏಕಾಏಕಿ ಈ ರೀತಿ ನಿರ್ಧಾರ ಮಾಡಿರುವುದು ಸರಿಯಾದ ರೀತಿಯಲ್ಲ. ಆದ್ದರಿಂದ ಕೂಡಲೇ ಮರುಪರಿಶೀಲಿಸಿ ಸ್ಥಳೀಯ ಗ್ರಾಮದ ಜನತೆಗೆ ಸಹಕಾರಿಯಾಗುವಂತಹ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಘಟನಾ ಕಾರ್ಯದರ್ಶಿ ಸಚಿನ್ ರಾಜ್ ಶೆಟ್ಟಿ ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ.
- Friday
- November 1st, 2024