Ad Widget

ನಮ್ಮ ಪ್ರಧಾನಿ ನಮ್ಮ ಹೆಮ್ಮೆ 70 ರ ಸಂಭ್ರಮ


ಹತ್ತು ವರ್ಷದ ಹಿಂದೆ ಕೆಲವರ ಹತ್ತಿರ ನಮ್ಮ ದೇಶದ ಪ್ರಧಾನಿ ಯಾರು ಅಂತ ಪ್ರಶ್ನೆ ಕೇಳಿದರೆ ಸರಿಯಾದ ಉತ್ತರಕ್ಕೆ ಹತ್ತು ನಿಮಿಷ ಕಾಯುವ ಕಷ್ಟದ ಕಾಲ. ಕೆಲವರಂತು ದಿಗ್ವಿಜಯ್ ಸಿಂಗ್ ಆಗಿರಬಹುದು ಅಂದವರಿದ್ದಾರೆ ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಇಟ್ಟು ಪ್ರಣಬ್ ಮುಖರ್ಜಿ ಅಂದವರು ಇದ್ದಾರೆ. ಇವತ್ತು ನನ್ನ 8 ವರ್ಷದ ಮಾವನ ಮಗಳು ಬೆಳ್ಳಂಬೆಳಗ್ಗೆ ಎದ್ದು ಸ್ವಲ್ಪ ಹೊತ್ತಿನ ನಂತರ ನನ್ನ ಹತ್ತಿರ ಬಂದವಳು. ಇವತ್ತು ಪ್ರಧಾನಿ ಮೋದಿ ತಾತನದ್ದು ಹುಟ್ಟಿದ ದಿನ ಅಲ್ವ ಅಂತ ನಿನ್ನೆ ಮಾತನಾಡಿದನ್ನು ಇವತ್ತು ನೆನಪಿಸಿದಳು .ಅಷ್ಟರ ಮಟ್ಟಿಗೆ ಪ್ರಧಾನಿ ಪ್ರಧಾನಿ ಮೋದಿಯವರು ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ. ಗುಜರಾತಿನ ಉತ್ತರ ಪ್ರಾಂತದಲ್ಲಿ ಸಂಘದ ಪ್ರಚಾರಕರಾಗಿ ನಂತರ ಸಂಘದ ಸೂಚನೆಯ ಮೇರೆಗೆ ಭಾ.ಜ.ಪದ ಜವಾಬ್ದಾರಿಯನ್ನು ವಹಿಸಿಕೊಂಡ ಮೋದಿಯವರು. 6 ಬಾರಿ ಗುಜರಾತಿನ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ, ಸ್ಜಜನಪಕ್ಷಪಾತ, ಯಾವ ಆರೋಪವು ಇಲ್ಲದೆ. ದಕ್ಷ ಅಡಳಿತ ನೀಡಿದ ಮೋದಿಯವರು 2014 ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಪಕ್ಷ ಘೋಷಣೆ ಮಾಡಿತು. ವಿರೋಧ ಪಕ್ಷಗಳು ಮೋದಿಯವರನ್ನು ಸಾವಿನ ವ್ಯಾಪಾರಿ ಎಂದು ಜರೆದವು ಚಹಾ ಮಾರುವವನು ದೇಶದ ಪ್ರಧಾನಿ ಆಗಲು ಯೋಗ್ಯನ ಅಂತ ಅವಮಾನಿಸಿದವು. ಅವೆಲ್ಲದರ ಮಧ್ಯೆ ದೇಶದಾದ್ಯಂತ ಹಲವಾರು ಚುನಾವಣಾ ಸಭೆಗಳು ನಡೆದವು. ಬಹುತೇಕ ಸಮಾವೇಶಗಳಲ್ಲಿ ಅಂದರೆ ದಿನದಲ್ಲಿ 2 ಅಥವಾ 3 ಸಮಾವೇಶಗಳಲ್ಲಿ ಮೋದಿಯವರೆ ಸಮಾವೇಶಗಳಲ್ಲಿ ಸೇರಿದ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುತಿದ್ದರು. ದೇಶದ ಬಹುತೇಕ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಮಾವೇಶಗಳು ನಡೆದವು .ಚುನಾವಣೆಯ ನಂತರ ವಿರೋಧ ಪಕ್ಷಗಳಿಗೆ 2014 ರ ಚುನಾವಣೆಯ ಪಲಿತಾಂಶವು ಸಿಡಿಲಿನ ರೀತಿಯಲ್ಲಿ ಅಪ್ಪಲಿಸಿದಂತು ಸತ್ಯ. ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿಯವರು ದೇಶದಲ್ಲಿ ಬಡವರಿಗಾಗಿ ಜನಧನ್, ಅಟಲ್ ಪೆನ್ಶನ್, ಭಾರತೀಯ ಜನೌಷಧಿ ಕೇಂದ್ರ , ಹೀಗೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರು. ಶತ್ರು ರಾಷ್ಟ್ರ ಪಾಕ್ ಭಾರತದ ಗಡಿರೇಖೆಯಲ್ಲಿ ಸೈನಿಕರ ಮೇಲೆ ದಾಳಿ ಮಾಡಿದಕ್ಕೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪಾಕ್ ಗೆ ಸರಿಯಾದ ಉತ್ತರ ಕೊಡುವ ಮೂಲಕ ಇನ್ನುಳಿದ ಶತ್ರುರಾಷ್ಟ್ರಗಳಿಗು ಇದು ಎಚ್ಚರಿಕೆಯ ಕರೆಗಂಟೆ ಬಾರಿಸಿದಂತಿತ್ತು. ಐದು ವರ್ಷ ಅದ್ಭುತ ಆಡಳಿತ ನೀಡಿದ ಪ್ರಧಾನಿಯವರ ಮೇಲೆ ಯಾವುದೆ ಕಪ್ಪುಚುಕ್ಕೆ ಇಲ್ಲದ ಆಡಳಿದ ವರ್ಣಿಸಲು ಅಸಾಧ್ಯ. ಒಂದು ರೀತಿಯ ದನಿವರಿಯದ ಕಾರ್ಯ ಒಂದು ಕಾಲದಲ್ಲಿ ಅಮೇರಿಕಾ ನರೇಂದ್ರ ಮೋದಿಯವರಿಗೆ ವೀಸಾ ಕೊಡಲು ನಿರಾಕರಿಸಿತು. ಅದೆ ಅಮೇರಿಕಾ ಪ್ರಧಾನಿಯಾದ ನಂತರದ ದಿನಗಳಲ್ಲಿ ಕೈ ಬೀಸಿ ಕರೆಯಿತು .ಬಹುತೇಕ ದೇಶಗಳು ಭಾರತದೊಂದಿಗೆ ಬಂಡವಾಳ ಹೂಡಿಕೆ ಮಾಡಲು ಕೈ ಜೋಡಿಸಿದವು . ಪ್ರಧಾನಿಯವರು ವಿಶ್ವಯೋಗದಿನಕ್ಕೆ ಕರೆ ಕೊಟ್ಟಾಗ ಅದನ್ನು ಜಗತ್ತಿನ ಬಹುತೇಕ ದೇಶಗಳು ಯೋಗದಿನವನ್ನಾಗಿ ಆಚರಿಸುವ ಮೂಲಕ ಬೆಂಬಲ ಸೂಚಿಸಿದವು. ಮುಂದೆ ಎರಡನೆ ಅವಧಿಗೂ ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯವರನ್ನೆ ಘೋಷಣೆ ಮಾಡಿತು. ಚುನಾವಣೆ ನಂತರ ಪಲಿತಾಂಶ ಕೆಲವು ಪಕ್ಷಗಳ ಅಸ್ತಿತ್ವವನ್ನೆ ಕಳೆದುಕೊಳ್ಳುವಂತಿತ್ತು. ಮೊದಲನೆ ಬಾರಿ ಕಾಂಗ್ರೆಸೇತರ ಪಕ್ಷವೊಂದು ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆರಿತು. ಪ್ರಧಾನಿಯಾಗಿ ಎರಡನೆ ಬಾರಿ ಪ್ರಮಾಣವಚನ ಸ್ವೀಕರಿಸಿದ ಮೋದಿಯವರು ಜಮ್ಮು ಕಾಶ್ಮೀರ ದ ಆರ್ಟಿಕಲ್ 370 ವಿದಿಯನ್ನು ತೆಗೆದು ಹಾಕುವ ಮೂಲಕ ಒಂದೆ ದೇಶ ಒಂದೆ ಧ್ವಜ ಒಂದೆ ಸಂವಿಧಾನ ಪದಕ್ಕೆ ನ್ಯಾಯ ಕೊಟ್ಟರು. ಕೋರೋನದಂತಹ ಮಹಾಮಾರಿ ಜಗತ್ತನ್ನೆ ಆವರಿಸಿದ ಸಂಧರ್ಭ ಬಲಾಡ್ಯ ದೇಶಗಳೆಲ್ಲ ದಿಕ್ಕುತೋಚದಂತೆ ಆದವು. ನಮ್ಮ ದೇಶದ ಪ್ರಧಾನಿಯವರು ದೇಶದ ಜನರಲ್ಲಿ ಕೊರೋನ ದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ದೇಶದ ಜನರಿಗೆ ಏಕಕಾಲದಲ್ಲಿ ಚಪ್ಪಾಳೆ ತಟ್ಟುವ ಮೂಲಕ ಕೊರೋನ ವಾರಿಯರ್ಸ್ ಗೆ ಧನ್ಯವಾದ ಸಲ್ಲಿಸಿ ಅಂತ ದೇಶದ ಜನರಿಗೆ ಕರೆ ಕೊಟ್ಟಾಗ ಇಡಿ ದೇಶದ ಜನ ಕೊಟ್ಟ ಬೆಂಬಲ ಅಭೂತಪೂರ್ವ. ಎರಡನೇ ಅವಧಿಯಲ್ಲಿ ದೀಪ ಹಚ್ಚಲು ಕರೆ ಕೊಟ್ಟಾಗ ಮೋದಿ ವಿರೋಧಿಗಳು ಕೂಡ ಪಕ್ಷ ಭೇದ ಮರೆದು ದೀಪ ಹಚ್ಚಿದ್ದು ಪ್ರಧಾನಿಯವರ ಕಾರ್ಯವೈಖರಿಯನ್ನು ವಿರೋಧಿಗಳು ಒಪ್ಪುವಂತೆ ಮಾಡಿತು. ಇವತ್ತು ಪ್ರಧಾನಿ ನರೇಂದ್ರ ಮೋದಿಯವರ 70 ನೇ ವರುಷದ ಜನುಮದಿನವನ್ನು ಇಡಿ ದೇಶದ ಜನ ಸಂಭ್ರಮಿಸುತಿದ್ದಾರೆ. ಪಕ್ಷದ ಕಡೆಯಿಂದ ಒಂದು ವಾರದ ವರೆಗೆ ಸೇವಾ ಸಪ್ತಾಹ ಕಾರ್ಯಕ್ರಮ ದೇಶದಾದ್ಯಂತ ನಡೆಯಲಿದೆ ಜೊತೆಯಾಗಿ ನಡೆಯೋಣ ದೇಶ ಕಟ್ಟೋಣ ಅನ್ನುವ ದ್ಯೇಯ ವಾಕ್ಯಕ್ಕೆ ಕಟಿಬದ್ದರಾಗಿ ಪ್ರಧಾನಿಯವರ ಸಂಕಲ್ಪ ಕ್ಕೆ ಅಳಿಲಿನ ರೀತಿಯ ಕಾರ್ಯವು ನಮ್ಮದಾಗಲಿ ಎಂದು ಹಾರೈಸುವೆ.

. . . . .

📝 ಕೇಶವ ಆರ್ಯ ಪೆರುವಾಜೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!