
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಸುಳ್ಯ ಇದರ ಆಶ್ರಯದಲ್ಲಿ ಗುತ್ತಿಗಾರು ರಿಕ್ಷಾ ಚಾಲಕ, ಮಾಲಕರು ಪ್ರಾರಂಭಿಸಿದ ಫ್ರೆಂಡ್ಸ್ ಹೆಸರಿನ ಸಂಘವನ್ನು ಗುತ್ತಿಗಾರು ಒಕ್ಕೂಟದ ಅಧ್ಯಕ್ಷ ಅಚ್ಯುತ ಗುತ್ತಿಗಾರು ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಗುತ್ತಿಗಾರು ವಲಯದ ಮೇಲ್ವಿಚಾರಕರಾದ ಸುಧಿರ್ ರವರು ಸಂಘದ ನಿಯಮಾವಳಿಗಳನ್ನು ಹಾಗೂ ಸಂಘದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು.
ಫ್ರೆಂಡ್ಸ್ ಸಂಘದ ಅಧ್ಯಕ್ಷರಾಗಿ ಶಶಿಧರ ಕೆಪಳಕಜೆ, ಕಾರ್ಯದರ್ಶಿ ಶಶಿ ಚಣಿಲ ಖಜಾಂಚಿ ಯಾಗಿ ಚೇತನ ಬಳ್ಳಡ್ಕ ಸದಸ್ಯರಾಗಿ ಧನಂಜಯ ಗೊರಗೊಡಿ, ಮಣಿಕಂಠ ಕಾಜಿಮಡ್ಕ, ಪಿ.ರವಿಂದ್ರ ಪೈಕ ಮತ್ತು ವಿವೇಕಾನಂದ ಪೈಕ ಇವರನ್ನು ಆಯ್ಕೆ ಮಾಡಲಾಯಿತು
ಗುತ್ತಿಗಾರು ಒಕ್ಕೂಟದ ಸೇವಾಪ್ರತಿನಿಧಿ ಶ್ರೀ ಲೋಕೇಶ್ವರ ಡಿ ಆರ್ ಕಾರ್ಯಕ್ರಮ ನಿರೂಪಿಸಿದರು.