
ಕಳಂಜ – ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತಿ ಹಾಗೂ ನಾಗರಿಕ ಸೇವಾ ಸಮಿತಿ ಬಾಳಿಲ – ಮುಪ್ಪೇರ್ಯ ಇದರ ಜಂಟಿ ಆಶ್ರಯದಲ್ಲಿ ಸೆ.20 ರಂದು ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಶಿಬಿರವು ಬಾಳಿಲ ಸೊಸೈಟಿಯ ಮಿನಿ ಸಭಾಂಗಣದಲ್ಲಿ ಜರುಗಲಿದೆ. ಶಿಬಿರವು ಬೆಳಗ್ಗೆ 9.30ರಿಂದ ಆರಂಭಗೊಳ್ಳಲಿದ್ದು, ಕಾರ್ಡ್ ಮಾಡಿಸುವವರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯ ಮೂಲ ಪ್ರತಿಯೊಂದಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಆಯೋಜಕರು ವಿನಂತಿಸಿದ್ದಾರೆ.