ಸುಮಂಗಲ ಸ್ವಸಹಾಯ ಸಂಘ ಬಾಳಿಲ ಮತ್ತು ದ.ಕ.ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ರೋಜ್ ಗಾರ್ ದಿನಾಚರಣೆ ಮತ್ತು ಅಣಬೆ ಕೃಷಿ ತರಬೇತಿಯು ಸೆ.16 ರಂದು ಬಾಳಿಲ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಣಬೆ ಕೃಷಿಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾದ ತೀರ್ಥಾನಂದ ಕೊಡೆಂಕಿರಿಯವರು ತರಬೇತಿ ನೀಡಿದರು. ಪುತ್ತೂರಿನ ನಿತ್ಯ ಫುಡ್ ಪ್ರಾಡಕ್ಟ್ಸ್ ನ ರಾಧಾಕೃಷ್ಣ ಇಟ್ಟಿಗುಂಡಿಯವರು ತಮ್ಮ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ‘ಆತ್ಮಯೋಜನೆ’ ಕೃಷಿ ಇಲಾಖೆ ಸುಳ್ಯ ಇದರ ತಾಂತ್ರಿಕ ವ್ಯವಸ್ಥಾಪಕರಾದ ಪ್ರಶಾಂತ್, ಬಾಳಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ಉಪಸ್ಥಿತರಿದ್ದರು. ಬಾಳಿಲ ಸುಮಂಗಲ ಸ್ವಸಹಾಯ ಸಂಘದ ಎಂ.ಬಿ.ಕೆ. ಶ್ರೀಮತಿ ಮಧುರ ತೋಟದಮೂಲೆ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದ ಸದಸ್ಯರು, ಪ್ರಗತಿಪರ ಕೃಷಿಕರು ಭಾಗವಹಿಸಿದ್ದು, ಎಲ್ಲಾ ಶಿಬಿರಾರ್ಥಿಗಳಿಗೆ ಕೃಷಿ ಇಲಾಖೆಯ ವತಿಯಿಂದ ಅಣಬೆ ಬೀಜ ವಿತರಿಸಲಾಯಿತು.
- Friday
- November 22nd, 2024