ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಿಕಲಚೇತನ ವಿದ್ಯಾರ್ಥಿ ಪ್ರಥಮಶೇಣಿಯಲ್ಲಿ ಅಂಕವನ್ನು ಪಡೆದು ವಿಕಲಚೇತನವು ಶಾಪವಲ್ಲ. ಧೈರ್ಯ ಮತ್ತು ಛಲದಿಂದ ಎದುರಿಸಿದರೆ ಸಮಾಜದಲ್ಲಿ ಯಾವುದೇ ವ್ಯಕ್ತಿಯೂ ಸಾಧನೆಯ ಶಿಖರವನ್ನು ಏರಬಹುದು ಎಂಬ ವಿಶ್ವಾಸವನ್ನು ಈ ಭಾರಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸಿಂಚನ್ ಎಸ್ ಎಂಬ ವಿದ್ಯಾರ್ಥಿಯೂ ತೋರಿಸಿಕೊಟ್ಟಿದ್ದಾರೆ. ಮೂಲತಃ ಗೂನಡ್ಕ ದೊಡ್ಡಡ್ಕ ಪರಿಸರದ ಸದಾನಂದ ಮತ್ತು ಆಶಾ ಬಿ.ಆರ್ ದಂಪತಿಗಳ ಪುತ್ರರಾಗಿದ್ದು, ಹುಟ್ಟಿನಿಂದಲೇ ದೃಷ್ಠಿದೋಷ ಸಮಸ್ಯೆಯನ್ನು ಎದುರಿಸಿದವರು. ಶೇ.೭೫ರಷ್ಟು ದೃಷ್ಠಿದೋಷ ಸಮಸ್ಯೆಯಿಂದ ಬಳಲುತ್ತಿದ್ದ ಇವರು ವೈದ್ಯರುಗಳ ಸಲಹೆ ಸೂಚನೆಗಳಿಂದ ೧ನೇ ತರಗತಿಯಿಂದಲೇ ಕನ್ನಡಕದ ಮೊರೆ ಹೋದ ಇವರ ಕಣ್ಣುಗಳು ವಿದ್ಯಾಭ್ಯಾಸ ಪಡೆಯಬೇಕೆಂಬ ಛಲದಿಂದ ತನ್ನ ದೃಷ್ಠಿ ದೋಷವು ಸಮಸ್ಯೆಯಲ್ಲ ಇದನ್ನು ಎದುರಿಸಿ ಉತ್ತಮ ವಿದ್ಯಾರ್ಥಿಯಾಗಿ ಎಲ್ಲಾ ವಿದ್ಯಾರ್ಥಿಗಳಂತೆ ಅಧ್ಯಾಪಕರುಗಳಿಂದ ಭೇಷ್ ಎನಿಸಬೇಕೆಂಬ ಛಲವನ್ನು ಇವರು ಹೊಂದಿದ್ದರು. ಇವರ ಈ ಶ್ರಮವು ವಿಕಲಚೇತನರು ಅಸಮರ್ಥರಲ್ಲ ಇವರಲ್ಲಿಯೂ ಸಾಧಕರುಗಳು ಇರುತ್ತಾರೆ ಎಂಬುದನ್ನು ತೋರಿಸಿಕೊಟ್ಟರು. ಇಂತಹ ವಿದ್ಯಾರ್ಥಿಗಳಲ್ಲಿ ವಿಶೇಷ ಸಾಮಾರ್ಥ್ಯವಿರುತ್ತದೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದವರಲ್ಲಿ ವಿಕಲಚೇತನರು ಬಹಳ ಹೆಚ್ಚಾಗಿ ಕಂಡುಬರುತ್ತಾರೆ. ಜೀವನವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸಾಧನೆಯನ್ನು ಹಿಂಬಾಲಿಸುವವರು ಇವರಾಗಿರುತ್ತಾರೆ. ಗೂನಡ್ಕ ತೆಕ್ಕಿಲ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸದಲ್ಲಿ ನಿರತರಾಗಿರುವ ಇವರು ಕೇವಲ ಓದಿನಲ್ಲಿ ಮಾತ್ರವಲ್ಲದೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ೧೧೩, ಇಂಗ್ಲೀಷ್‌ನಲ್ಲಿ ೯೦, ಹಿಂದಿಯಲ್ಲಿ ೯೮, ಗಣಿತದಲ್ಲಿ ೬೭, ವಿಜ್ಞಾನದಲ್ಲಿ ೬೭ ಮತ್ತು ಸಮಾಜ ವಿಜ್ಞಾನದಲ್ಲಿ ೭೭ ಅಂಕವನ್ನು ಪಡೆದು ೫೧೨ ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ. ಮೊದಲಿಗೆ ಕನ್ನಡಕವನ್ನು ಬಳಸುತ್ತಿದ್ದ ಇವರು ಶಾಲೆಗಳಲ್ಲಿ ಇತರ ವಿದ್ಯಾರ್ಥಿಗಳ ಜೊತೆಗೂಡಿ ಆಟವಾಡುವ ಸಂದರ್ಭ ಬೇರೆ ವಿದ್ಯಾರ್ಥಿಗಳಿಗೆ ನನ್ನ ಕನ್ನಡಕವು ಆಟಿಕೆಯಾಗಬಾರದೆಂಬ ಸಂಕುಚಿತ ಮನೋಭಾವವು ಇವರಲ್ಲಿ ಇದ್ದವು. ಆದ್ದರಿಂದ ಸಿಂಚನ್‌ರವರ ಪೋಷಕರು ಮಗನ ಈ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗಿ ಇದೀಗ ಕಣ್ಣಿಗೆ ಲೇನ್ಸ್ ಆಳವಡಿಸಿ ಸಾಮಾನ್ಯ ಎಲ್ಲಾ ಮಕ್ಕಳಂತೆ ಇವರನ್ನು ಕೂಡ ಗುರುತಿಸುವಂತೆ ಮಾಡಿದ್ದಾರೆ. ಇದರೊಂದಿಗೆ ವಿಕಲಚೇತನವು ಶಾಪವಲ್ಲ ಛಲದಿಂದ ಎದುರಿಸಿದಲ್ಲಿ ವರದಾನವು ಆಗುತ್ತದೆ ಎಂಬುದನ್ನು ಸಿಂಚನ್‌ರವರು ತೋರಿಸಿಕೊಟ್ಟಿದ್ದಾರೆ. ಇವರ ಮುಂದಿನ ವಿದ್ಯಾರ್ಥಿ ಜೀವನವು ಉತ್ತಮವಾಗಿ ಸಾಗಿ ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸುವ ಭಾಗ್ಯ ಇವರದಾಗಲಿ ಎಂದು ಹಾರೈಸೋಣ. ವಿಕಲಚೇತನ ಮಕ್ಕಳಿಗೆ ಕರುಣೆ ತೋರಿಸುವ ಬದಲು ಆತ್ಮಸೈರ್ಯವನ್ನು ತುಂಬುವ ಕೆಲಸವನ್ನು ಮಾಡೋಣ.
- Saturday
- November 23rd, 2024