

ಪಂಚಮಿ ಸಂಜೀವಿನಿ ಒಕ್ಕೂಟ ಕಳಂಜ ಮತ್ತು ದ.ಕ.ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ರೋಜ್ ಗಾರ್ ದಿನಾಚರಣೆ ಮತ್ತು ಅಣಬೆ ಕೃಷಿ ತರಬೇತಿಯು ಸೆ.16 ರಂದು ಕಳಂಜ ಗ್ರಾ.ಪಂ.ನ ಗೌರಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಮಿ ಸಂಜೀವಿನಿ ಕಳಂಜ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಕುಲ್ಸು ವಹಿಸಿದ್ದರು. ಅಣಬೆ ಕೃಷಿಯ ಬಗ್ಗೆ ತೀರ್ಥಾನಂದ ಕೊಡೆಂಕಿರಿಯವರು ತರಬೇತಿ ನೀಡಿದರು. ಪುತ್ತೂರಿನ ನಿತ್ಯ ಫುಡ್ ಪ್ರಾಡಕ್ಟ್ಸ್ ನ ರಾಧಾಕೃಷ್ಣ ಇಟ್ಟಿಗುಂಡಿಯವರು ತಮ್ಮ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ, ಅಣಬೆ ಉತ್ಪನ್ನಗಳ ಸ್ಯಾಂಪಲ್ ನೀಡಿದರು. ವೇದಿಕೆಯಲ್ಲಿ ನರೇಗಾ ಯೋಜನೆಯ ತಾಲೂಕು ಸಂಯೋಜಕಿ ಕು.ನಮಿತಾ, ಕಳಂಜ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶ್ರೀಧರ್.ಕೆ.ಆರ್, ಕಾರ್ಯದರ್ಶಿ ಪದ್ಮಯ್ಯ.ಕೆ, ಸಂಜೀವಿನಿ ಯೋಜನೆಯ ತಾಲೂಕು ಮೇಲ್ವಿಚಾರಕ ಮಹೇಶ್, ಸಂಯೋಜಕ ಸುಶಾಂತ್ ಉಪಸ್ಥಿತರಿದ್ದರು. ಪಂಚಮಿ ಸಂಜೀವಿನಿ ಕಳಂಜ ಒಕ್ಕೂಟದ ಎಂ.ಬಿ.ಕೆ. ಶ್ರೀಮತಿ ಪುಷ್ಪಾವತಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಎಲ್.ಸಿ.ಆರ್.ಪಿ. ಶ್ರೀಮತಿ ಯಶೋಧ ಮಣಿಮಜಲು ಸ್ವಾಗತಿಸಿ, ಪಂ.ಅಭಿವೃದ್ಧಿ ಅಧಿಕಾರಿ ಶ್ರೀಧರ್.ಕೆ.ಆರ್ ವಂದಿಸಿದರು. ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಕೃಷಿ ಇಲಾಖೆಯ ವತಿಯಿಂದ ‘ಅಣಬೆ ಕಿಟ್’ ವಿತರಿಸಲಾಯಿತು.