Ad Widget

ಸಂಪಾಜೆ : ಅರಮನೆತೋಟ ಮಹಾವಿಷ್ಣುಮೂರ್ತಿ ದೈವಸ್ಥಾನದ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭೆ ಕು. ಗೀತಾ ಹೆಚ್.ಸಿ ಗೆ ಸನ್ಮಾನ

ಕೊಡಗು ಸಂಪಾಜೆಯ ಅರಮನೆತೋಟ
ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸೆ.16 ರಂದು ಬೆಳಿಗ್ಗೆ ಕನ್ಯಾ ಸಂಕ್ರಾಂತಿ ಪೂಜೆ ನಡೆಯಿತು, ಈ ಸಂದರ್ಭದಲ್ಲಿ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಕು. ಗೀತಾ ಹೆಚ್.ಸಿ ಇವಳನ್ನು ಸನ್ಮಾನಿಸಲಾಯಿತು. ದೈವಸ್ಥಾನದ ಆಡಳಿತ ಮಂಡಳಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈಕೆ ಈ ಬಾರಿಯ ದ್ವಿತೀಯ ಪಿಯುಸಿ ಕಲಾ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ 600 ರಲ್ಲಿ 558 (93%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಪಡೆದಿರುತ್ತಾಳೆ. ಕೊಡಗು ಜಿಲ್ಲೆಗೆ ಮೂರನೇ ಸ್ಥಾನವನ್ನು ಪಡೆದಿರುತ್ತಾಳೆ
ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕುಮಾರ್ ಚೆದ್ಕಾರ್, ಮಾಜಿ ಯೋಧರು, ಹಿರಿಯರು ಶ್ರೀ ಮಾಯಿಲಪ್ಪ ಮೂಲ್ಯ, ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯೆ ರಮಾದೇವಿ ಬಾಲಚಂದ್ರ ಕಳಗಿ, ದೈವಸ್ಥಾನದ ಆಡಳಿತ ಅಧ್ಯಕ್ಷರಾದ ಕೊರಗಪ್ಪ ಅರಮನೆತೋಟ, ದೈವಸ್ಥಾನದ ಆಡಳಿತ ಗೌರವಾಧ್ಯಕ್ಷರಾದ ಶಭರೀಶ್ ಕುದ್ಕುಳಿ, ಕಾರ್ಯದರ್ಶಿ ಕೃಷ್ಣ ಅರಮನೆತೋಟ, ಸಹ ಕಾರ್ಯದರ್ಶಿ ಶೇಖರ ಅರಮನೆತೋಟ, ಸಂಪಾಜೆ ಭಾಗದ ಆಶಾ ಕಾರ್ಯಕರ್ತೆ ಸಾವಿತ್ರಿ ಕೊರಗಪ್ಪ, ಪೂವಯ್ಯ ಬೈತಡ್ಕ, ಕೋಡಿ ಲಕ್ಷ್ಮಣ, ಸಂಪಾಜೆ ಪಯಸ್ವಿನಿ ಯುವಕ ಮಂಡಲದ ಸದಸ್ಯರುಗಳು, ವಿದ್ಯಾರ್ಥಿನಿಯ ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading