ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಆನ್ ಲೈನ್ ಹಿಂದಿ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟ
ಡಾ. ದಯಾನಂದ ಪೈ, ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥ ಬೀದಿ, ಮಂಗಳೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ ವತಿಯಿಂದ 2020 ರ ಹಿಂದಿ ದಿನಾಚರಣೆ ಪ್ರಯುಕ್ತ ಮೊದಲ ಬಾರಿಗೆ ಆನ್ ಲೈನ್ ಹಿಂದಿ ಭಾಷಣ ಸ್ಪರ್ಧೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಿಗೆ ಏರ್ಪಡಿಸಲಾಗಿತ್ತು. ಸೆ.7 ರಿಂದ ಸೆ.12 ರವರೆಗೆ ಸ್ಪರ್ಧಿಗಳು ತಾವು ಮನೆಯಲ್ಲಿಯೇ ಸಿದ್ಧ ಪಡಿಸಿದ ವೀಡಿಯೋಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಸ್ಪರ್ಧೆಯ ಫಲಿತಾಂಶವನ್ನು ಸೆ.14 ರಂದು ಹಿಂದಿ ದಿನಾಚರಣೆಯ ಶುಭ ಸಂದರ್ಭದಲ್ಲಿ ಘೋಷಿಸಲಾಯಿತು.
ಮಡಿಕೇರಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ನಲವತ್ತು ಕಾಲೇಜುಗಳಿಂದ ಸ್ವೀಕರಿಸಿದ ವೀಡಿಯೊಗಳನ್ನು ತೀರ್ಪುಗಾರರು ಪರಿಶೀಲಿಸಿ ಉತ್ತಮವಾದ ಐದು ವೀಡಿಯೋಗಳಿಗೆ ಬಹುಮಾನವನ್ನು ಘೋಷಿಸಿದ್ದು, ಪ್ರಥಮ ಬಹುಮಾನ ಒಂದು ಸಾವಿರ ರೂಪಾಯಿ ಹಾಗಾ ಪ್ರಶಸ್ತಿ ಪತ್ರವನ್ನು ಪುತ್ತೂರಿನ ಸಂತ ಫಿಲೊಮಿನಾ ಕಾಲೇಜಿನ ವಿದ್ಯಾರ್ಥಿನಿ ಸ್ನಿಗ್ಧ ಎಮ್ ಜೆ ಪಡೆದುಕೊಂಡಿರುತ್ತಾರೆ, ಹಾಗೆಯೇ ದ್ವಿತೀಯ ಬಹುಮಾನ ಏಳು ನೂರ ಐವತ್ತು ರೂಪಾಯಿಗಳು ಹಾಗೂ ಪ್ರಶಸ್ತಿ ಪತ್ರವನ್ನು ಉಡುಪಿಯ ತ್ರಿಶಾ ವಿದ್ಯಾ ಕಾಲೇಜಿನ ಶೃತಿ ಶ್ರೀಕಾಂತ ಶಾನಭಾಗ್ ಪಡೆದಿರುತ್ತಾರೆ. ತೃತೀಯ ಬಹುಮಾನವನ್ನು ಮೂವರು ವಿದ್ಯಾರ್ಥಿಗಳಿಗೆ ನೀಡಿದ್ದು, ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿನಿ ಪವಿತ್ರ ನಾಯಕ್, ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಲ್ಲವಿ ಕೆ ಹಾಗೂ ಮಂಗಳೂರು ರಥಬೀದಿಯ ಡಾ. ದಯಾನಂದ ಪೈ, ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿಸಾರ್ ಅಹಮದ್ ಐದುನೂರು ರೂಪಾಯಿ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದು ಕೊಂಡಿರುತ್ತಾರೆ.
- Sunday
- November 24th, 2024