
ಹಿಂದೂ ಜಾಗರಣ ವೇದಿಕೆ ಮಂಡೆಕೋಲು ಘಟಕದ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ ಸೆ.13 ರಂದು ನಡೆಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಅನಿಲ್ ತೋಟಪ್ಪಾಡಿ, ಅಧ್ಯಕ್ಷರಾಗಿ ಅಶ್ವಥ್ ಕಣೆಮರಡ್ಕ ,
ಉಪಾಧ್ಯಕ್ಷರಾಗಿ ಮನೋಜ್ ಜಾಲಬಾಗಿಲು ,ಜಯಪ್ರಕಾಶ್ ಬೊಳುಗಲ್ಲು, ಪ್ರಧಾನ ಕಾರ್ಯದರ್ಶಿಗಳಾಗಿ ಮನೋಜ್ ಕಣೆಮರಡ್ಕ, ಪ್ರಶಾಂತ್ ಕನ್ಯಾನ, ಸಹ ಕಾರ್ಯದರ್ಶಿಗಳಾಗಿ ಸುಧೀಶ್ ಶಿವಾಜಿನಗರ, ಅಶೋಕ್ ಬಾಯಿಕೋಡಿಮೂಲೆ, ಸಂಪರ್ಕ ಪ್ರಮುಖರಾಗಿ ರವಿಚಂದ್ರ ಮಾವಂಜಿ, ಬಾಲಚಂದ್ರ ಮಂಡೆಕೋಲು, ದೀಕ್ಷಿತ್ ಜಾಲಬಾಗಿಲು, ಪ್ರಚಾರ ಪ್ರಮುಖರಾಗಿ ಮನೀಶ್ ಶಿವಾಜಿನಗರ, ನಿಧಿ ಪ್ರಮುಖ್ ರಾಕೇಶ್ ಉಗ್ರಾಣಿಮನೆ, ಮಾತೃ ಸುರಕ್ಷಾ ಪ್ರಮುಖರಾಗಿ ದೇವಿಪ್ರಸಾದ್ ಕಣೆಮರಡ್ಕ, ದಯಾನಂದ ಶಿವಾಜಿನಗರ, ಸಂತೋಷ್ ಕಣೆಮರಡ್ಕ, ಹಿಂದೂ ಯುವ ವಾಹಿನಿ ಪ್ರಮುಖರಾಗಿ ನಿತೇಶ್ ಮಂಡೆಕೋಲು ಆಯ್ಕೆಯಾದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ಮಹೇಶ್ ಮೇನಾಲ, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಮಡಪ್ಪಾಡಿ, ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಳ, ಹಿಂಜಾವೇ ಪುತ್ತೂರು ತಾಲೂಕು ಇದರ ಕಾರ್ಯದರ್ಶಿ ಹರಿಶ್ಚಂದ್ರ ಪಡುಮಲೆ, ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಮಹೇಶ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಕೊಡಿಯಾಲ, ಪ್ರಚಾರ ಪ್ರಮುಖ್ ಚಂದು ಕೊಡಿಯಾಲ, ಸುರೇಶ್ ಕಣೆಮರಡ್ಕ , ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ಜತೆ ಕಾರ್ಯದರ್ಶಿ ಶ್ರೀಮತಿ ವಿನುತಾ ಪಾತಿಕಲ್ಲು, ಮಂಡೆಕೋಲು ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಮೋಹಿನಿ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ಅಜಿತ್ ಬನ್ನೂರು, ಚಂದ್ರಜಿತ್ ಮಾವಂಜಿ, ವಿಪಿನ್ ನಂಬಿಯಾರ್, ಉಪಸ್ಥಿತರಿದ್ದರು. ಶಿವಪ್ರಸಾದ್ ಉಗ್ರಾಣಿಮನೆ ಸ್ವಾಗತಿಸಿ, ಮಹೇಶ್ ರೈ ಮೇನಾಲ ಶುಭ ಹಾರೈಸಿದರು.