ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು , ಜಾಲ್ಸೂರು ವಲಯದ ಮಂಡೆಕೋಲು ಘಟಕ ಇದರ ವತಿಯಿಂದ ‘ಭಾರತ ಮಾತಾ ಪೂಜಾನ’ ಕಾರ್ಯಕ್ರಮ ಹಾಗೂ 1990ರ ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ ಮಂಡೆಕೋಲು ಗ್ರಾಮದ ‘ರಾಮಭಕ್ತ’ ಸ್ವಯಂಸೇವಕರಿಗೆ ಸನ್ಮಾನ ಮತ್ತು ಮಂಡೆಕೋಲು ಹಿಜಾವೇ ನೂತನ ಘಟಕದ ಜವಾಬ್ದಾರಿ ಘೋಷಣೆ ಕಾರ್ಯಕ್ರಮವು ಸೆ.13 ರಂದು ಮಂಡೆಕೋಲಿನ ಅಮೃತ ಸಹಕಾರ ಸದನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಅನಂದ್ ರಾವ್ ಕಾಂತಮಂಗಲ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಹಾಗೂ ಅಖಿಲ ಭಾರತ ಜನಜಾಗೃತಿ ಸಮಿತಿ ಸುಳ್ಯ ಇದರ ವಲಯಧ್ಯಕ್ಷರಾದ ಸುರೇಶ್ ಕಣೆಮರಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ್ ರಾವ್ ದೀಪಪ್ರಜ್ವಲನಗೊಳಿಸಿದರು. ಶಿವಪ್ರಸಾದ್ ಉಗ್ರಾಣಿ ಮನೆ ಇವರ ವೈಯಕ್ತಿಕ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ‘ಅಯೋಧ್ಯೆ ರಾಮ ಜನ್ಮ ಭೂಮಿ ಹೋರಾಟ’ದ ಬಗ್ಗೆ ರಾಷ್ಟ್ರಿಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಪ್ರಖರವಾಗ್ಮಿ ರಾಜೇಶ್ ಶೆಟ್ಟಿ ಮೇನಾಲ ಉಪನ್ಯಾಸ ನೀಡಿದರು. ಅನಂತರ 1990ರಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಕರಸೇವೆಯಲ್ಲಿ ಭಾಗವಹಿಸಿದ ಕೇನಾಜೆ ಸುಂದರ , ನಾರಾಯಣ ಕಣೆಮರಡ್ಕ, ದಾಮೋದರ ಪಾತಿಕಲ್ಲು, ಕುಮಾರ್ ಮಾವಂಜಿ, ಕುಮಾರ್ ಕನ್ಯಾನ, ಸಂತೋಷ ಮಾವಂಜಿ ಇವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ್ ಮಾವಂಜಿ ಧನ್ಯವಾದ ಸಮರ್ಪಿಸಿದರು.
- Friday
- November 1st, 2024