
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಜಾಲ್ಸೂರು ವಲಯದ ಸಮಿತಿಯ ರಚನೆಯು ಸೆ.13 ರಂದು ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ ನಡೆಯಿತು. ಈ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸತೀಶ್ ಆಚಾರ್ಯ, ಅಧ್ಯಕ್ಷರಾಗಿ ತೀರ್ಥರಾಮ ಬಾಳೆಕೊಡಿ, ಉಪಾಧ್ಯಕ್ಷರಾಗಿ ವಸಂತ ವಿಷ್ಣುನಗರ, ಪ್ರಧಾನ ಕಾರ್ಯದರ್ಶಿಗಳಾಗಿ ವಿನಯ್ ಕುಮಾರ್ ನಾರಾಲು, ಕಾರ್ಯದರ್ಶಿಗಳಾಗಿ ರಾಕೇಶ್ ಕಣೆಮರಡ್ಕ, ಹಿಮಕರ ಕುಕ್ಕಂದೂರು, ಸಂಪರ್ಕ ಪ್ರಮುಖರಾಗಿ ಸಂದೀಪ್ ರೈ, ರಂಜಿತ್ ಬಾಳೆಕೊಡಿ, ಪ್ರಚಾರ ಪ್ರಮುಖರಾಗಿ ರೋಹಿತ್ ಬುಡ್ಲೆಗುತ್ತು, ನಿಧಿ ಪ್ರಮುಖ್ ದಿನೇಶ್ ರೈ ಕದಿಕಡ್ಕ, ಮಾತೃಸುರಕ್ಷಾ ಪ್ರಮುಖರಾಗಿ ರವಿರಾಜ್, ಸಂದೀಪ್ ಕಲ್ಲುಮುರ, ಹಾಗೂ ಹಿಂದೂ ಯುವವಾಹಿನಿ ಪ್ರಮುಖರಾಗಿ ಕಿಶೋರ್ ಕುಂದ್ರುಕೋಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಆನಂದ ರಾವ್ ಕಾಂತಮಂಗಲ, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಮಡಪ್ಪಾಡಿ, ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಳ, ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿ ಹರಿಶ್ಚಂದ್ರ ಪಡುಮಲೆ, ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷ ಮಹೇಶ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಕೊಡಿಯಾಲ, ಪ್ರಚಾರ ಪ್ರಮುಖ್ ಚಂದು ಕೊಡಿಯಾಲ, ಹಿಂದೂ ಜಾಗರಣ ವೇದಿಕೆ ಪ್ರಮುಖ್ ಮಹೇಶ್ ರೈ ಮೇನಾಲ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ಅಜಿತ್ ಬನ್ನೂರು, ಉಪಸ್ಥಿತರಿದ್ದರು. ರಾಕೇಶ್ ಕಣೆಮರಡ್ಕ ಸ್ವಾಗತಿಸಿ, ಆನಂದ ರಾವ್ ಕಾಂತಮಂಗಲ ಶುಭಹಾರೈಸಿದರು.