
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಇಂದಿರಾವತಿ.ಕೆ ಯವರು ಪದೋನ್ನತಿ ಹೊಂದಿದ್ದು, ಇದೀಗ ಸರಕಾರಿ ಪ್ರೌಢಶಾಲೆ ಸಂಪಾಜೆ ಇಲ್ಲಿಗೆ ಹಿಂದಿ ಭಾಷಾ ಶಿಕ್ಷಕಿಯಾಗಿ ಭಡ್ತಿ ಹೊಂದಿದ್ದಾರೆ.
21.02.2004 ರಲ್ಲಿ ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಳ ಇಲ್ಲಿ ಸಹಶಿಕ್ಷಕಿಯಾಗಿ ಸೇವೆಗೆ ನಿಯೋಜನೆಯಾಗಿ 7 ವರ್ಷಗಳ ಸೇವೆಯನ್ನು ಸಲ್ಲಿಸಿದರು. ತದನಂತರ ಸ.ಉ.ಹಿ.ಪ್ರಾಥಮಿಕ ಶಾಲೆ ಪೇರಾಲು ಇಲ್ಲಿ 10 ವರ್ಷಗಳ ಸೇವೆಗೈದು, ಇದೀಗ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕಿಯಾಗಿ ಭಡ್ತಿಗೊಂಡಿದ್ದಾರೆ.
ಪೆರಾಜೆ ಗ್ರಾಮದ ಕೊಳಂಗಾಯ ನಿವಾಸಿಯಾಗಿರುವ ಇವರು ಮಡಿಕೇರಿಯ ಸರಕಾರಿ ಪ್ರೌಢಶಾಲೆ ಕರಿಕೆಯಲ್ಲಿ ಶಿಕ್ಷಕರಾಗಿರುವ ಶ್ರೀ ಅಶೋಕ್. ಕೆ.ಎಸ್ ರವರ ಪತ್ನಿ. ಅವಳಿ ಮಕ್ಕಳಾದ ಪುಷ್ಪಕ್.ಕೆ.ಎ ಹಾಗೂ ಪುಷ್ಪಿತಾ.ಕೆ.ಎ, ಅಂಬಿಕಾ ಪದವಿಪೂರ್ವ ವಿದ್ಯಾಲಯ ಬಪ್ಪಳಿಗೆ ಇಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.