
ಕೊಲ್ಲಮೊಗ್ರದ ಸ.ಹಿ.ಪ್ರಾ.ಶಾಲೆ. ಬಂಗ್ಲೆ ಗುಡ್ಡೆ ಯಲ್ಲಿ ಸಹಶಿಕ್ಷಕಿಯಾಗಿದ್ದ ಶ್ರೀಮತಿ ತುಳಸಿಯವರು ಪದೋನ್ನತಿ ಹೊಂದಿದ್ದು ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಬಿಳಿಯೂರು ಮಡತ್ತಾರು ಇಲ್ಲಿಗೆ ಕನ್ನಡ ಭಾಷಾ ಸಹಶಿಕ್ಷಕರಾಗಿ ಭಡ್ತಿ ಹೊಂದಿದ್ದಾರೆ. ಇವರು ಸ.ಹಿ.ಪ್ರಾಥಮಿಕ ಶಾಲೆ ಕೊಟ್ಟೂರು ಮಡಿಕೇರಿ ತಾಲೂಕು ಕೊಡಗು ಜಿಲ್ಲೆಯಲ್ಲಿ 15 ವರ್ಷಸೇವೆ ಸಲ್ಲಿಸಿ ನಂತರ, ಸ.ಹಿ.ಪ್ರಾಥಮಿಕ ಶಾಲೆ ಬೋಳಿಯಾರು ಮಸೀದಿ ಬಳಿ ಮಂಗಳೂರು ದಕ್ಷಿಣದಲ್ಲಿ 4 ವರ್ಷಗಳ ಸೇವೆಯನ್ನು ಸಲ್ಲಿಸಿ ತದನಂತರ ಮಂಗಳೂರು ದಕ್ಷಿಣ ವಲಯದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ಕಳೆದ ಮಾರ್ಚ್ ನಿಂದ ವರ್ಗಾವಣೆ ಗೊಂಡು ಕೊಲ್ಲಮೊಗ್ರದ ಸ..ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದರು. ಇದೀಗ ಪ್ರೌಢಶಾಲಾ ಶಿಕ್ಷಕರಾಗಿ ಭಡ್ತಿಗೊಂಡಿದ್ದಾರೆ. ಇವರು ಮೂಲತಃ ಮಂಗಳೂರಿನವರು. ಪತಿ ಗಂಗಾಧರ್. ಬಿ.ವಿ ಯವರು ಹಾಸನದ ಕೆ.ಪಿ.ಟಿ.ಸಿ.ಲ್ ನಲ್ಲಿ ಲೆಕ್ಕ ನಿಯಂತ್ರಣಾಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರಿಯರಾದ ಯಶಸ್ವಿನಿ ಮತ್ತು ತೇಜಸ್ವಿನಿ ವ್ಯಾಸಂಗ ಮಾಡುತ್ತಿದ್ದಾರೆ.