ಆಯಾ ಗ್ರಾಮ ಪಂಚಾಯತಿಗಳಿಂದ ಅನುಮತಿ ಪಡೆದು ಮರಳುಗಾರಿಕೆ ನಡೆಸಲು ಮುಂದಿನ ದಿನಗಳಲ್ಲಿ ಸಾಧ್ಯತೆ. ಜಿಲ್ಲಾ ಆಡಳಿತದಿಂದ ಈ ರೀತಿಯ ವ್ಯವಸ್ಥೆ ಕಲ್ಪಿಸಲು ಈಗಾಗಲೆ ಸಿದ್ಧತೆಗಳು ಆರಂಭಗೊಂಡಿದೆ ಇದರ ಅಂಗವಾಗಿ ಇಂದು ಸುಳ್ಯ ತಾಲೂಕಿನ ಹಳ್ಳ ,ನದಿ ತಟ, ಸಣ್ಣ ಮತ್ತು ದೊಡ್ಡ ತೋಡುಗಳ ವಿವಿಧ ಸ್ಥಳಗಳಿಗೆ ತಹಶೀಲ್ದಾರ್ ಅನಂತ ಶಂಕರ್ ರವರ ನೇತೃತ್ವದಲ್ಲಿ ಸ್ಥಳ ಪರಿಶೀಲನಾ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಂಜ ಕಂದಾಯ ನಿರೀಕ್ಷಕ ಶಂಕರ್, ಮೊದಲಾದವರು ಉಪಸ್ಥಿತರಿದ್ದರು. ಇದರಿಂದ ಮುಂದಿನ ದಿನಗಳಲ್ಲಿ ಹಲವು ವರ್ಷಗಳಿಂದ ಮರಳುಗಾರಿಕೆ ಯಲ್ಲಿ ಉಂಟಾದ ಸಮಸ್ಯೆಗಳಿಗೆ ಪರಿಹಾರ ದೊರೆತಂತಾಗುತ್ತದೆ. ಸುಳ್ಯ ಪಯಸ್ವಿನಿ ನದಿಯಲ್ಲಿ ಈಗಾಗಲೇ ನೀರಿನ ಮಟ್ಟ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಮರಳುಗಾರಿಕೆ ನಡೆಸುವ ಕುರಿತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಕೂಡ ತಿಳಿದುಬಂದಿದೆ.
- Thursday
- November 21st, 2024