ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.12 ರಂದು ಸಂಘದ ಅಧ್ಯಕ್ಷ ಬಿಟ್ಟಿ ಬಿ.ನಡುನಿಲಂ ಇದರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘವು 2019-20 ನೇ ಸಾಲಿನಲ್ಲಿ ಗಳಿಸಿದ ಲಾಭಾಂಶ ವಿಂಗಡನೆ ಮಾಡುತ್ತ 15% ಡಿವಿಡೆಂಟ್ ಅನ್ನು ಸದಸ್ಯರಿಗೆ ಕೊಡುವುದೆಂದು ಘೋಷಿಸಿದರು. ಸುಳ್ಯ ತಾಲೂಕಿನ ಎಲ್ಲಾ ಧರ್ಮಿಯಾರಿಗೂ ಕಳೆದ 10 ವರ್ಷಗಳಿಂದ ಉತ್ತಮ ಸೇವೆಯನ್ನು ನೀಡುತ್ತಿರುವ ಸಂಘವು ಇನ್ನು ಮುಂದೆಯೂ ಎಲ್ಲರೂ ನೀಡಬೇಕೆಂದು ಅಧ್ಯಕ್ಷ ವಿನಂತಿಸಿದರು. ಹೊಸ ಯೋಜನೆಗಳಾದ ರಿಕರಿಂಗ್ ಡೆಪೊಸಿಟ್, ಕ್ಯಾಶ್ ಸರ್ಟಿಫಿಕೇಟ್ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.ಎಲ್ಲಾ ಸದಸ್ಯರಿಗೂ ಅನುಕೂಲ ಆಗುವಂತಹ ಯೋಜನೆಗಳನ್ನು ಆರ್‌ಡಿ ಯೋಜನೆಯಲ್ಲಿ ಆಳವಡಿಸಲಾಗಿದೆ ಹಾಗೂ ಏಳುವರೆ ವರ್ಷದಲ್ಲಿ ದ್ವಿಗುಣವಾಗುಂತಹ ಕ್ಯಾಶ್ ಸರ್ಟಿಫಿಕೇಟನ್ನು ಕೂಡಾ ಪರಿಚಯಿಸಲಾಯಿತು. ಸುಳ್ಯ ತಾಲೂಕಿನ ಎಲ್ಲಾ ಧರ್ಮಕೇಂದ್ರದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪೋತ್ಸಾಹ ಧನ ನೀಡಿ ಗೌರವಿಸಲಾಯಿತು. ಅಧ್ಯಕ್ಷರು ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಿತ್ ಪಿಜಿ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕಿ ಶ್ರೀಮತಿ ಸುನೀತಾ ಎಮ್ ಡಿ’ಸೋಜಾರವರು ಆಡಳಿತ ವರದಿ ವಾಚಿಸಿದರು. ಉಪಾಧ್ಯಕ್ಷ ಜೋನ್ ವಿಲಿಯಂ ಲಸ್ರಾದೋ ಶುಭಹಾರೈಸಿದರು. ನಿರ್ದೇಶಕ ಲಿಜೋ ಜೋಸ್ ವಂದಿಸಿದರು.
- Friday
- November 1st, 2024