ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಬೀಜದಕಟ್ಟೆ ಅಭಿಮಾನಿಗಳ ಬಳಗ ಬೆಂಗಳೂರು ಜಂಟಿ ಸಹಯೋಗದೊಂದಿಗೆ ಸತತ ನಾಲ್ಕನೇ ಬಾರಿಗೆ ಉಚಿತ ಝೂಮ್ ಆನ್ಲೈನ್ ತರಬೇತಿ ಕಾರ್ಯಾಗಾರ ನಡೆಯಲಿದೆ.
ಇದೇ ಬರುವ ಸೆ.19 ಶನಿವಾರದಂದು ಸಾಯಂಕಾಲ 7.30 ರಿಂದ ರಾತ್ರಿ 9.15 ರ ವರೆಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಮಕ್ಕಳನ್ನು ಬೆಳೆಸುವ ರೀತಿ ಎಂಬ ವಿಷಯದ ಬಗ್ಗೆ ಪೋಷಕರೊಂದಿಗೆ ,ಅಂತರರಾಷ್ಟ್ರೀಯ ಖ್ಯಾತಿಯ ತರಬೇತುದಾರರಾದ ವಿ. ಅಶ್ವಥ್ ರಾಮಯ್ಯನವರು ತರಬೇತಿಯನ್ನು ನಡೆಸಿಕೊಡಲಿದ್ದಾರೆ.
ಉಚಿತ ಆನ್ಲೈನ್ ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಯವರು ವಹಿಸಲಿದ್ದು ಉದ್ಘಾಟನೆಯನ್ನು ಬಿಎಫ್ಎ 1 ಸದಸ್ಯರು ಹಾಗೂ ಅಮೇರಿಕಾದ ಅರಿಝೋನದಲ್ಲಿ ಉದ್ಯೋಗದಲ್ಲಿರುವ ವಿಲ್ ಫ್ರೆಡ್ ಆoಡ್ರೇಡ್ ರವರು ನೆರವೇರಿಸಲಿರುವರು.
ಮುಖ್ಯ ಅತಿಥಿಗಳಾಗಿ
ಇಂಟರ್ ಪ್ಲೆಕ್ಸ್ ಎಲೆಕ್ಟ್ರಾನಿಕ್ಸ್ ಇಂ. ಪ್ರೈ. ಲಿಮಿಟೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಎಂ. ವಾಸು, ಹೆಚ್.ಆರ್.ಬುಖಾತಿರ್ ಗ್ರೂಪ್ ದುಬೈ ಇದರ ಸಹ ವ್ಯವಸ್ಥಾಪಕರು ಅಶೋಕ್ ಬೈಲೂರು, ಲಗುನ ಕ್ಲಾತಿಂಗ್ ಬೆಂಗಳೂರು ಇದರ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಸದಾಶಿವ, ಎಮಿರೇಟ್ಸ್ ಗ್ರೂಪ್ ದುಬೈ ಇದರ ವ್ಯಾಪಾರ ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ರಿಫಾಯಿ ಪಟೇಲ್ ಗೂನಡ್ಕ ಇವರು ಭಾಗವಹಿಸಲಿದ್ದಾರೆ.
ಈಗಾಗಲೇ ಎಪ್ಪತ್ತಕ್ಕೂ ಹೆಚ್ಚು ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಲು ನೋಂದಣಿ ಮಾಡಿದ್ದು ಇನ್ನೂ ಯಾರಾದರು ಭಾಗವಹಿಸಲು ಆಸಕ್ತಿಯಿದ್ದವರು ಶಶಿಕಾಂತ್ (ಮೊ,9591997651) ರವರನ್ನು ಸಂಪರ್ಕಿಸಬಹುದು ಎಂದು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಬಿಎಫ್ಎ ಒನ್ ಮುಖ್ಯಸ್ಥರು ತಿಳಿಸಿರುತ್ತಾರೆ.