

ಆಸರೆ ಸಮಿತಿ ವತಿಯಿಂದ ನಿರ್ಮಾಣವಾಗಲಿರುವ ಅಬ್ದುಲ್ಲ ದರ್ಕಸ್ತು ಅವರ ಮನೆಯ ಶಿಲಾನ್ಯಾಸ ಕಾರ್ಯಕ್ರಮ ಇಂದು ನಡೆಯಿತು. ಬಡ ನಿರ್ಗತಿಕರಾದ ಅಬ್ದುಲ್ಲ ರವರ ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ ಆಸರೆ ಸಮಿತಿ ನೇತೃತ್ವದಲ್ಲಿ ಅಬ್ದುಲ್ಲ ರವರ ಮನೆಗೆ ಸಮಿತಿ ಸದಸ್ಯ ರಾದ ಮುನೀರ್ ದಾರಿಮಿ ಉಸ್ತಾದ್ ಶಿಲಾನ್ಯಾಸ ನೆರವೇರಿಸಿದರು. ಇನ್ನೋರ್ವ ಸಮಿತಿ ಸದಸ್ಯರಾದ ಲತೀಫ್ ಸಖಾಫಿ ದುಹಾ ನೆರವೇರಿಸಿದರು, ಸಮಿತಿ ಸಂಚಾಲಕರಾದ ಮಹಮದ್ ಕುಂಞ ಗೂನಡ್ಕ ಸಂಘಟಕರಾದ ಹಮೀದ್ ಜಿ. ಕೆ., ಅಬೂಸಾಲಿ.ಪಿ. ಕೆ., ಸದಸ್ಯರುಗಳಾದ ಉಮ್ಮರ್, ಹಾರಿಸ್. ಝಮ್ ಝಮ್, ಅಬ್ದುಲ್ಲ ಜಿ ಎಂ., ಅಬ್ಬಾಸ್ ಟಿ. ಬಿ., ಅಬ್ದುಲ್ಲ ಎಸ್.ಎಂ., ಸವಾದ್ ಗೂನಡ್ಕ, ಹನೀಫ್, ಮತ್ತಿತರು ಉಪಸ್ಥಿತರಿದ್ದರು.