ಮುಸಲ್ಮಾನ ಬಾಂಧವರ ಪವಿತ್ರ ಶುಕ್ರವಾರದ ಪ್ರಾರ್ಥನೆಯ ದಿನದಂದು ಮಹಾಮಾರಿ ಕೊರೋನ ವೈರಸ್ ಹಿನ್ನೆಲೆಯಲ್ಲಿ ಇಡೀ ಮಾನವಕುಲಕ್ಕೆ ಶಾಂತಿಗಾಗಿ, ಆರೋಗ್ಯಭರಿತ ಜೀವನಕ್ಕಾಗಿ ಮೊಗರ್ಪಣೆ ದರ್ಗಾ ಶರೀಫ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನೇತೃತ್ವವನ್ನು ಸೈಯದ್ ಜೈನುಲ್ ಅಬಿದಿನ್ ತಂಙಳ್ ಜಯನಗರ ವಹಿಸಿದ್ದರು. ಕೊರೋನ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಪ್ರಾರ್ಥನಾ ಮಂದಿರಗಳು ಸ್ತಬ್ಧವಾಗಿದ್ದು ಅತೀ ಶೀಘ್ರದಲ್ಲಿ ಈ ಮಹಾಮಾರಿ ವೈರಸ್ ತೊಲಗಿ ಮತ್ತೊಮ್ಮೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಪೂಜಾ ಪ್ರಾರ್ಥನೆಗಳು ನಡೆದು ಭಕ್ತಾದಿಗಳು ತಮ್ಮ ತಮ್ಮ ಇಷ್ಟದೇವತೆಗಳ ಸನ್ನಿಧಿಗೆ ಬರುವಂತಾಗಲಿ ಎಂದು ಪ್ರಾರ್ಥಿಸಲಾಯಿತು.
- Tuesday
- December 3rd, 2024