
ಸುಳ್ಯ ತಾಲೂಕಿನ ಪಂಜದಲ್ಲಿ ಹಾಗೂ ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಶಂಕರ ಕುಮಾರ್ ಕರಿಕಳ ಇವರು ಕರ್ನಾಟಕ ಬ್ಯಾಂಕ್ ಕಾನೂನು ಸಲಹೆಗಾರರ ಪ್ಯಾನೆಲ್ ಬೋರ್ಡ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪಂಜದಲ್ಲಿ ಕಚೇರಿ ಹೊಂದಿರುವ ನ್ಯಾಯವಾದಿ ಶಂಕರ ಕುಮಾರ್ ಅವರು ಸುಳ್ಯ, ಪುತ್ತೂರಿನಲ್ಲಿಯೂ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕವಾಗಿಯೂ ವಿವಿಧ ಸಂಘಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.