
ಆಲೆಟ್ಟಿ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಧಾಕೃಷ್ಣ. ಕೆ.ಎಸ್ ರವರು ಪದೋನ್ನತಿ ಹೊಂದಿದ್ದು ಇದೀಗ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಸೂರ್ಯ, ಇಡ್ಕಿದು ಇಲ್ಲಿಗೆ ಆಂಗ್ಲಭಾಷಾ ಸಹಶಿಕ್ಷಕರಾಗಿ ಭಡ್ತಿ ಹೊಂದಿದ್ದಾರೆ. ಇವರು ಸ.ಉ.ಹಿ.ಪ್ರಾಥಮಿಕ ಶಾಲೆ ಕಲ್ಮಕಾರು ಇಲ್ಲಿ 10 ವರ್ಷ, ಸ.ಹಿ.ಪ್ರಾಥಮಿಕ ಶಾಲೆ ಮಿತ್ತಡ್ಕ- ಮರ್ಕಂಜದಲ್ಲಿ 3 ವರ್ಷಗಳ ಸೇವೆಯನ್ನು ಸಲ್ಲಿಸಿ ತದನಂತರ ಆಲೆಟ್ಟಿ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯದಲ್ಲಿದ್ದರು. 2019 ರಲ್ಲಿ ನಡೆದ ಕೌನ್ಸೆಲಿಂಗ್ ನಲ್ಲಿ ಸ.ಉ.ಹಿ.ಪ್ರಾ.ಶಾಲೆ ಮುರುಳ್ಯ, ಶಾಂತಿನಗರ ಶಾಲೆಯನ್ನು ಆಯ್ಕೆಮಾಡಿಕೊಂಡಿದ್ದು, ಪ್ರಕೃತ ಪ್ರೌಢಶಾಲಾ ಶಿಕ್ಷಕರಾಗಿ ಭಡ್ತಿಗೊಂಡಿದ್ದಾರೆ.
ಮೂಲತಃ ಮಡಿಕೇರಿ ತಾಲೂಕಿನ ಚೆಂಬು ನಿವಾಸಿಯಾಗಿರುವ ಇವರು ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿದ್ದಾರೆ. ಇವರ ಪತ್ನಿ ಶ್ರೀಮತಿ ಅಕ್ಷತಾ.ಎಂ ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜು ನೆಲ್ಲಿಕಟ್ಟೆಯಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಿಯಾಗಿದ್ದು, ಮಗ ವಿಶ್ವಜಿತ್ ಹಾಗೂ ಮಗಳು ಆರಾಧ್ಯರೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.