
ಜೇಸಿಐ ಸುಳ್ಯ ಪಯಸ್ವಿನಿ ಘಟಕದ ವತಿಯಿಂದ “ಜೇಸಿಐ ಸಪ್ತಾಹ 2020” ಸೆ.9 ರಂದು ಬಿ. ಸಿ. ಯಂ ಹಾಸ್ಟೆಲ್ ನಲ್ಲಿ ನಡೆಯಿತು. ವಲಯ 15 ರ ಪ್ರಾಂತ್ಯ ಜಿ ಯ ಉಪಾಧ್ಯಕ್ಷರಾದ ಜೆಇಎಫ್ ಪ್ರದೀಪ್ ಬಾಕಿಲರವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತಾಲ್ಲೂಕಿನ ಮೂರು ಮಂದಿ ಯುವ ಸಾಧಕೀಯರನ್ನು ಗೌರವಿಸಲಾಯಿತು. ವಲಯ 15 ರ ಕಾರ್ಯಕ್ರಮ ನಿರ್ದೇಶಕಿ ಜೆಎಫ್ ಎಮ್. ಅಶ್ವಿನಿ ಐತಾಳ್ ಗೌರವಿಸಿ, ಅಭಿನಂದಿಸಿದವರು. ವಸತಿ ನಿಲಯದಲ್ಲಿ ಓದಿ ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿ ಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಘಟಕದ ಪೂರ್ವಾಧ್ಯಕ್ಷರಾದ ಜೇಸಿ ಚೆನ್ನಕೇಶವ ಜಾಲ್ಸೂರ್, ನಿಲಯದ ಮೇಲ್ವಿಚಾರಕಿ ಶ್ರೀಮತಿ ಸುಹಾಸಿನಿ, ಜೇಸಿರೆಟ್ ಅಧ್ಯಕ್ಷೆ ಚೈತನ್ಯ ದೇವರಾಜ್, ಸಪ್ತಾಹ ನಿರ್ದೇಶಕ ಜೇಸಿ ರಂಜಿತ್ ಕುಕ್ಕೆಟ್ಟಿ, ಯುವ ಜೇಸಿ ಅಧ್ಯಕ್ಷ ಚಿತ್ತಾರ ಬಂಟ್ವಾಳ್, ಮತ್ತು ಯೋಜನೆ ನಿರ್ದೇಶಕ ಸುರೇಶ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷರಾದ ಜೇಸಿ ದೇವರಾಜ್ ಕುದ್ಪಾಜೆ ವಹಿಸಿದ್ದರು.