
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಾಲ್ಕೂರು ಒಕ್ಕೂಟದ ಚೆಮ್ನೂರು ದಾಮೋದರ ಗೌಡರವರ ಮನೆಯಲ್ಲಿ ನೂತನ ಶಿವಾನಿ ಪ್ರಗತಿಬಂಧು ಸಂಘವನ್ನು ಹಿರಿಯರಾದ ದಾಮೋದರ ಗೌಡ ಚೆಮ್ಮೂರು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗುತ್ತಿಗಾರು ವಲಯ ಮೇಲ್ವಿಚಾರಕ ಸುಧೀರ್ ರವರು ಯೋಜನೆಯ ಕಾರ್ಯಕ್ರಮಗಳ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ ಮೋಹನ್ ಅಮೆ, ಸಂಯೋಜಕರಾಗಿ ಜಯಶ್ರೀ ಚೆಮ್ನೂರು. ಕೋಶಾಧಿಕಾರಿಯಾಗಿ ಜಯಶ್ರೀ ಅಮೆ, ಸದಸ್ಯರಾಗಿ ಸುಹಾನ ಚೆಮ್ಮೂರು, ಮೇಘಶ್ರೀ ಅಮೆ ಆಯ್ಕೆಮಾಡಲಾಯಿತು. ಒಕ್ಕೂಟದ ಜೊತೆ ಕಾರ್ಯದರ್ಶಿ ಲೋಹಿತ್ ಚೆಮ್ನೂರು ಕಾರ್ಯಕ್ರಮ ಸಂಘಟಿಸಿದರು. ನಾಲ್ಕೂರು ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.