ಐವರ್ನಾಡು ಗ್ರಾಮದ ಪಂಚಮೂಲ ಕಾಲೋನಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸೋಲಾರ್ ಹೋಮ್ ಲೈಟ್ ಸೌಲಭ್ಯವನ್ನು ಒದಗಿಸಲಾಯಿತು. ಅಜ್ಜಮೂಲೆ ಕಾಲೋನಿಯ ಸದಾನಂದ ಇವರ ಮನೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಇಲ್ಲಿನ ಸ್ಥಳೀಯ ಸುಮಾರು ಹನ್ನೊಂದು ಮನೆಗಳಿಗೆ ಸೋಲಾರ್ ಲೈಟ್ ಸೌಲಭ್ಯವನ್ನು ಒದಗಿಸಲಾಗಿದೆ.
ಅಜ್ಜಮೂಲೆ ಕಾಲೋನಿಯ ಜನರು ಜನವಸತಿ ಸಭೆಯಲ್ಲಿ ವಿದ್ಯುತ್ ಸಮಸ್ಯೆಯನ್ನು ಗ್ರಾಮ ಪಂಚಾಯಿತಿನ ಗಮನಕ್ಕೆ ತಂದಿದ್ದರು. ಈ ಭಾಗದಲ್ಲಿ ವಿದ್ಯುತ್ ಕಡಿತವಾದಲ್ಲಿ ಸುಮಾರು ಒಂದು ವಾರಗಳಷ್ಟು ಸಮಯ ವಿದ್ಯುತ್ ಇರುವುದಿಲ್ಲ. ಇದರಿಂದಾಗಿ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ತೊಂದರೆ ಉಂಟಾಗುತ್ತದೆ. ಮನೆಗಳಿಗೆ ಹಾವುಗಳು ನುಗ್ಗುವ ಭೀತಿ ಎದುರಾಗುತ್ತದೆ. ಆದ್ದರಿಂದ ಸೋಲಾರ್ ಲೈಟ್ಸ್ ವ್ಯವಸ್ಥೆಯನ್ನು ಮಾಡಬೇಕೆಂದು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಈ ಕುರಿತು ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಇದೀಗ ಸೌಲಭ್ಯವನ್ನು ಒದಗಿಸಲಾಗಿದೆ. ಆದ್ದರಿಂದ ಇವರ ಮನವಿಗೆ ಗ್ರಾಮಪಂಚಾಯಿತಿ ಸ್ಪಂದಿಸಿದಂತಾಗಿದೆ.
ಈ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಾಲನಿಯ ಜನರು ಉಪಸ್ಥಿತರಿದ್ದರು.