Ad Widget

ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ದಿನಕರ್ ಶೆಟ್ಟಿ ವರ್ಗಾವಣೆ – ನೂತನವಾಗಿ ಎ.ಎಸ್ಪಿ ಲಖನ್ ಸಿಂಗ್ ಯಾದವ್ ಅಧಿಕಾರ ಸ್ವೀಕಾರ

ಲಖನ್ ಸಿಂಗ್ ಯಾದವ್

ಪುತ್ತೂರು ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ ದಿನಕರ್ ಶೆಟ್ಟಿಯವರಿಗೆ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ನೂತನ ಐಪಿಎಸ್ ಅಧಿಕಾರಿ ಎ.ಎಸ್ಪಿ ಲಖನ್ ಸಿಂಗ್ ಯಾದವ್ ಸೆ.6ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

. . . . . . .

ಲಖನ್ ಸಿಂಗ್ ಯಾದವ್ ಅವರು ಮೈಸೂರಿನಲ್ಲಿ ಪ್ರೊಬೆಷನರಿ ಎ.ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ವರ್ಗಾವಣೆಗೊಂಡಿರುವ ಡಿವೈಎಸ್ಪಿ ದಿನಕರ್ ಶೆಟ್ಟಿಯ ಅವರು ಸುರತ್ಕಲ್ ನಿವಾಸಿಯಾಗಿದ್ದು ಈ ಹಿಂದೆ ಅವರು ಎಸಿಬಿಯಲ್ಲಿ ಡಿವೈಸ್ಪಿಯಾಗಿ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು.

ಚುನಾವಣೆ ಸಂದರ್ಭದಲ್ಲಿ ಮಡಿಕೇರಿಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿದ್ದರು. ಚುನಾವಣೆ ಬಳಿಕ ದಿನಕರ್ ಶೆಟ್ಟಿಯವರು ಮತ್ತೆ ಪುತ್ತೂರು ಡಿವೈಎಸ್ಪಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.

ಇದೀಗ ಪುತ್ತೂರಿಗೆ ನೂತನ ಎ.ಎಸ್ಪಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರು ದಿನಕರ್ ಶೆಟ್ಟಿಯವರು ವರ್ಗಾವಣೆಗೊಂಡಿದ್ದಾರೆ.

ಲಖನ್ ಸಿಂಗ್ ಯಾದವ್ ಅವರು ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಸ್ವಾಗತಿಸಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಎಸ್.ಐ ಜಂಬುರಾಜ್ ಮಹಾಜನ್, ಮಹಿಳಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಕುಸುಮಾಧರ್, ಸಂಚಾರ ಪೊಲೀಸ್ ಠಾಣೆ ಎಸ್.ಐ ರಾಮ ನಾಯ್ಕ ಅವರು ಉಪಸ್ಥಿತರಿದ್ದರು.
ಡಿವೈಎಸ್ಪಿ ದಿನಕರ ಶೆಟ್ಟಿ ಅವರ ಸೇವಾ ಅವಧಿಯಲ್ಲಿ ಸುಳ್ಯ ತಾಲೂಕಿನಾದ್ಯಂತ ಸಂಚರಿಸಿ ತಾಲೂಕಿನ ಪ್ರತಿಯೊಂದು ಠಾಣೆಗಳಿಗೆ ಭೇಟಿಯನ್ನು ನೀಡುತ್ತಾ, ಎಂತಹದೇ ಸಂದಿಗ್ಧ ಪರಿಸ್ಥಿತಿ ಇದ್ದರೂ ಕೂಡ ಅದನ್ನು ಸೂಕ್ತ ರೀತಿಯಲ್ಲಿ ಸರಿಪಡಿಸಿ ಯಶಸ್ವಿಯಾದಂತಹ ಹಲವಾರು ನಿರ್ದೇಶನಗಳು ಅವರ ಅವಧಿಯಲ್ಲಿ ನಡೆದಿದೆ. ಒಟ್ಟಿನಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ನಿಷ್ಠೆಯಿಂದ ಮತ್ತು ಜವಾಬ್ದಾರಿಯುತ ಸೇವೆಯನ್ನು ಸಲ್ಲಿಸಿ ಸಾರ್ವಜನಿಕರಿಂದ ಪ್ರಶಂಸೆಯನ್ನು ಪಡೆದಿದ್ದಾರೆ. ಜನರೊಂದಿಗೆ ಬೆರೆತು ಸಾರ್ವಜನಿಕ ಕಳಕಳಿಯಿಂದ ತಮ್ಮ ಸೇವಾ ಅವಧಿಯನ್ನು ನೀಡಿದ್ದಾರೆ. ಎನ್ ಆರ್ ಸಿ ,ಸಿ ಎ ಎ ವಿಷಯಗಳಿಗೆ ಸಂಬಂಧಿಸಿದಂತೆ ತಾಲೂಕಿನಾದ್ಯಂತ ಪರ-ವಿರೋಧ ಪ್ರತಿಭಟನೆಗಳು ನಡೆದಿದ್ದವು. ಎಲ್ಲಾ ಪರಿಸ್ಥಿತಿಯಲ್ಲಿಯೂ ತಮ್ಮ ಜವಾಬ್ದಾರಿಯುತ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ತಾಲೂಕಿನಲ್ಲಿ ಶಾಂತಿ ನೆಲೆಸಲು ಅವಿರತ ಶ್ರಮವನ್ನು ಪಟ್ಟು ಯಶಸ್ವಿ ಸಾಧಿಸಿದ್ದರು. ಸಮಾಜದ ಪ್ರತಿಯೊಂದು ಕ್ಷೇತ್ರಗಳಲ್ಲೂ ಕೂಡ ಎಲ್ಲವನ್ನು ಸಮಾನರೀತಿಯಲ್ಲಿ ಕಾಣುತ್ತಿದ್ದ ಅವರು ಹಲವಾರು ಬಾರಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ನ್ಯಾಯ ಒದಗಿಸುವಲ್ಲಿ ಯಶಸ್ವಿ ಪಾತ್ರ ವಹಿಸುತ್ತಿದ್ದರು. ಈ ರೀತಿಯ ಸಮಾಜ ಸ್ನೇಹಿ ಅಧಿಕಾರಿಗಳು ತಮ್ಮ ಸೇವೆಯನ್ನು ಸಮಾಜದ ಹಿತಕ್ಕಾಗಿ ಮಾತ್ರ ಮುಡಿಪಾಗಿಟ್ಟ ಕಾರಣಗಳಿಂದ ಇಂದು ಸಮಾಜವು ಅಂತಹ ಅಧಿಕಾರಿಗಳನ್ನು ಗೌರವದಿಂದ ಕಾಣುತ್ತಾರೆ. ಮುಂದಿನ ಅವರ ಸೇವಾ ಅವಧಿಯು ಯಶಸ್ವಿಯಾಗಿ ನಡೆಯಲಿ, ಇಂತಹ ಅಧಿಕಾರಿಗಳಿಂದ ಸಮಾಜ ಇನ್ನಷ್ಟೂ ಸೇವೆ ಪಡೆಯಲಿ ಎಂದು ಅಮರ ಸುದ್ದಿ ಬಳಗ ಹಾರೈಸುತ್ತಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!