Ad Widget

ಅರಂತೋಡು ಪಂಚಾಯತ್ ಹಾಗೂ ನಿವಾಸಿಯೊಬ್ಬರ ಜಾಗದ ವಿವಾದ – ದಲಿತ್ ಸೇವಾ ಸಮಿತಿ ಆಕ್ಷೇಪ – ಸರ್ವೆ ಬಳಿಕ ವಿವಾದ ಇತ್ಯರ್ಥ

ಆರಂತೋಡು ಗ್ರಾಮ ಪಂಚಾಯತ್ ಸ. ನಂ 127/1 p 1 ರಲ್ಲಿ ಈ ಹಿಂದೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಯೋಜನೆ ಹಾಕಿದ ಸ್ಥಳ ವಿರೋಧ ಬಂದು ಕೊಡಂಕೇರಿಗೆ ಸ್ಥಳಾಂತರ ಗೊಂಡಿತ್ತು. ಇದೀಗ ಈ ಜಾಗಕ್ಕೆ ಪಂಚಾಯತ್ ಬೇಲಿ ಹಾಕುವ ವೇಳೆ ಮತ್ತೊಮ್ಮೆ ವಿವಾದ ಉಂಟಾಗಿ ದಲಿತ್ ಸೇವಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಕಂದಾಯ ಇಲಾಖೆ ಹಾಗೂ ಪೋಲೀಸರ ಸಮ್ಮುಖ ಸೆ.7 ಸರ್ವೆ ನಡೆದು ವಿವಾದ ಬಗೆಹರಿದಿದೆ.
ಬೇಲಿ ಹಾಕಿರುವ ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ ಸುಳ್ಯ ದಲಿತ್ ಸೇವಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ಸದ್ರಿ ಜಮೀನಿನಲ್ಲಿ ಬಿಯಾಳು ಎಂಬವರು ಸುಮಾರು 60 ವರ್ಷಗಳಿಂದ ವಾಸವಾಗಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಬಿಯಾಳು ಎಂಬವರು ಮೃತರಾಗಿರುತ್ತಾರೆ . ಹಾಗೆ ಸದ್ರಿ ಜಮೀನಿನ ದಾಖಲೆ ಪತ್ರಗಳು ಕಳೆದು ಹೋಗಿರುತ್ತದೆ.
ಬಿಯಾಳು ರವರ ಮಗಳು ದೇವಕಿ ಎಂಬವರಿಗೆ ಮನೆ ಕಟ್ಟಿ ವಾಸಿಸಲು ಜಮೀನಿನ ಅವಶ್ಯಕತೆ ಇರುತ್ತದೆ.
ಅಲ್ಲದೆ ಸುತ್ತ ಮುತ್ತಲಿನಲ್ಲಿ ಹಲವಾರು ಮನೆಗಳು ಪಕ್ಕದಲ್ಲಿ ಸರಕಾರಿ ಶಾಲೆ ಕೂಡ ಇದೆ. ಆದುದರಿಂದ ಘನ ತ್ಯಾಜ್ಯ ಘಟಕ ಸ್ಥಾಪಿಸಲು ನಮ್ಮ ವಿರೋದವಿದೆ. ಘನ ತ್ಯಾಜ್ಯ ಘಟಕ ವಿಲೇವಾರಿಗೆ ಮೀಸಲಿಟ್ಟ ಆದೇಶವನ್ನು ರದ್ದು ಪಡಿಸಿ ದೇವಕಿ ಎಂಬವರಿಗೆ ಮನೆ ಕಟ್ಟಲು ಅವಕಾಶ ಮಾಡಿ ಕೊಟ್ಟು ನ್ಯಾಯ ಒದಗಿಸಿಕೊಡಬೇಕೆಂದು ದಲಿತ್ ಸೇವಾ ಸಮಿತಿ ಸಂಬಂದಪಟ್ಟವರನ್ನು ಒತ್ತಾಯಿಸಿತ್ತು.
ಈ ಬಗ್ಗೆ ಸೆ.7 ರಂದು ಕಂದಾಯ ಇಲಾಖೆ, ತಾ.ಪಂ. ಮುಖ್ಯಕಾರ್ಯನಿರ್ಹಹಣಾಧಿಕಾರಿ ಹಾಗೂ ಪೋಲೀಸರ ಸಮ್ಮುಖದಲ್ಲಿ ಸರ್ವೆ ನಡೆದು ಪಂಚಾಯತ್ ಜಾಗವನ್ನು ಗುರುತಿಸಲಾಗಿದೆ. ‌

. . . . . . .

ಈ ಬಗ್ಗೆ ಪಿಡಿಓ ರವರನ್ನು ಸಂಪರ್ಕಿಸಿದಾಗ ಸ್ಥಳದ ಸರ್ವೇ ಮಾಡಿ ಪಂಚಾಯತ್ ಜಾಗ ಗುರುತಿಸಿದ್ದಾರೆ. 2015 ರಲ್ಲಿ ಎಸಿ ಯವರು 50 ಸೆಂಟ್ಸ್ ಜಾಗ ಮಂಜೂರು ಮಾಡಿದ್ದರು. ಘನತ್ಯಾಜ್ಯ ವಿಲೇವಾರಿಯ ಉದ್ದೇಶಕ್ಕೆ ಮಂಜೂರಾಗಿತ್ತು .‌ಆಗ ಸ್ಥಳೀಯ ನಿವಾಸಿಗಳಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಸದರಿ ಜಾಗವನ್ನು ಬೇರೆ ಸಾರ್ವಜನಿಕ ಉದ್ದೇಶಕ್ಕೆ ಬಳಸುವಂತೆ ಜಿಲ್ಲಾ ಪಂಚಾಯತ್ನಿಂದ ಆದೇಶಿಸಲಾಗಿತ್ತು ಆದುದರಿಂದ ತ್ಯಾಜ್ಯ ಘಟಕವನ್ನು ಕೊಡಂಕಿರಿ ಎಂಬಲ್ಲಿಗೆ ವರ್ಗಾಯಿಸಲಾಗಿತ್ತು. ಈಗ ಪಂಚಾಯತ್ ನಿಂದ ಈ ಸ್ಥಳವನ್ನು ಸಾರ್ವಜನಿಕ ಉದ್ದೇಶಕ್ಕೆ ನಿವೇಶನ ನಿರ್ಮಾಣ ಮಾಡಲು ತೀರ್ಮಾನಿಸಿ,15 ನೇ ಹಣಕಾಸು ಯೋಜನೆಯಲ್ಲಿ ಬೇಲಿ ಹಾಕಲಾಗಿತ್ತು. ಈಗ ಸರ್ವೆ ನಡೆದಿರುವುದರಿಂದ ವಿವಾದ ಸರಿಯಾಗಿದೆ. ಆ ಜಾಗದಲ್ಲಿ ಮನೆ ಕಟ್ಟಿ ನೆಲೆಸಿದ್ದ ಅವರಿಗೆ ಮನೆ ಕಟ್ಟಲು ಜಾಗ ಮೀಸಲಿಡಲಾಗಿದೆ. ಎಂದು ಸ್ಪಷ್ಟ ಪಡಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!