ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಭಾರತೀಯ ಜನೌಷಧಿ ಕೇಂದ್ರ ಬಡವರ ಮತ್ತು ಮಧ್ಯಮ ವರ್ಗದ ಪಾಲಿಗೆ ಶ್ರೀರಕ್ಷೆಯಾಗಿದೆ. ಸುಳ್ಯ ತಾಲೂಕಿನ ಒಂದು ಬಡಕುಟುಂಬದ ಒಬ್ಬರು ಸದಸ್ಯರಿಗೆ ದೇಹದ ಒಂದು ಭಾಗದ ನರದಲ್ಲಿ ರಕ್ತ ಸಂಚಾಲನದ ಆಗದೆ ಆರೋಗ್ಯದಲ್ಲಿ ಏರುಪೇರು ಆಗಿತ್ತು. ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ದುಡಿಯುವ ಕೈ ಶಕ್ತಿ ಕಳೆದುಕೊಂಡು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಸುಧಾರಿಸಿಕೊಳ್ಳುತಿದ್ದಾರೆ. ಪತ್ನಿ ದುಡಿಯುವ ಕಾರಣ ಸಂಸಾರದ ತೇರು ಹೇಗೋ ಸಾಗುತ್ತಿದೆ. ತಿಂಗಳಿಗೆ ಆರು ಬಗೆಯ ಮಾತ್ರೆಗಳು ಬೇಕು ಆ ಮಾತ್ರೆಗಳಿಗೆ ಮೆಡಿಕಲ್ ನಲ್ಲಿ ಸುಮಾರು ರೂಪಾಯಿ 2000 ತಗಲುತ್ತದೆ. ಅದೆ ಮಾತ್ರೆಗಳಿಗೆ ಜನೌಷಧಿ ಕೇಂದ್ರದಲ್ಲಿ 670 ರೂಪಾಯಿ. ಒಬ್ಬ ಬಡವ ಪ್ರತಿ ತಿಂಗಳು ಜನೌಷಧಿ ಕೇಂದ್ರ ಅಲ್ಲದೆ ಬೇರೆ ಔಷಧಿ ಕೇಂದ್ರದಲ್ಲಿ ಪ್ರತಿ ತಿಂಗಳು 2000 ರೂಪಾಯಿಗಳಿಗೆ ಔಷಧಿಗಳನ್ನು ಖರೀದಿಸುವುದು ಕಷ್ಟದ ಕೆಲಸ . ಹೀಗೆ ಬಡವರ , ಮಧ್ಯಮವರ್ಗದವರ ಪಾಲಿಗೆ ನೆರವಾಗುವ ದೃಷ್ಟಿಯಿಂದ ಜನೌಷಧಿ ಕೇಂದ್ರಗಳು ದೇಶದಾದ್ಯಂತ 726 ಜಿಲ್ಲೆಗಳಲ್ಲಿ 6300 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಸುಮಾರು 850 ಔಷಧಿಗಳ ಬೆಲೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಕೊಡಲಾಗುತ್ತಿದೆ . ಈ ಯೋಜನೆ ಜನಮಾನಸದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು ಮುಂದಿನ ದಿನಗಳಲ್ಲಿ ಜನೌಷಧಿ ಕೇಂದ್ರಗಳು ತಮ್ಮ ಕೇಂದ್ರಗಳನ್ನು ಮತ್ತಷ್ಟು ವಿಸ್ತರಿಸಲಿದೆ.
📝📝📝📝ಕೇಶವ ಆರ್ಯ ಪೆರುವಾಜೆ📝📝📝
- Saturday
- November 2nd, 2024