ಸುಳ್ಯ ಯುವಜನ ಸಂಯುಕ್ತ ಮಂಡಳಿ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಂಕರ್ ಪೆರಾಜೆಯವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಸುಳ್ಯ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಕೋಶಾಧಿಕಾರಿ ವಿಜಯ್ ಕುಮಾರ್ ಉಬರಡ್ಕ ವೇದಿಕೆಯಲ್ಲಿದ್ದರು. ಗೌರವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಕಾರ್ಯದರ್ಶಿ ತೇಜಸ್ವಿ ಕಡಪಳ ವರದಿ ಮಂಡಿಸಿದರು.
ಮಹಾಸಭೆಯಲ್ಲಿ 2020-21ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಶಂಕರ್ ಪೆರಾಜೆ, ಅಧ್ಯಕ್ಷರಾಗಿ ಅನಿಲ್ ಪೂಜಾರಿಮನೆ, ಉಪಾಧ್ಯಕ್ಷರುಗಳಾಗಿ ತೇಜಸ್ವಿ ಕಡಪಳ, ಗೀತಾ ಕಡ್ಯ, ಪ್ರಧಾನ ಕಾರ್ಯದರ್ಶಿಯಾಗಿ ರಾಜೀವಿ ಲಾವಂತಡ್ಕ, ಜತೆ ಕಾರ್ಯದರ್ಶಿ ಪವನ್ ಪಲ್ಲತಡ್ಕ, ವಿನುತ ಪಾತಿಕಲ್ಲು, ಕೋಶಾಧಿಕಾರಿಯಾಗಿ ವಿಜಯಕುಮಾರ್ ಉಬರಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಾರ್ತಿಕ್ ರೈ, ಕ್ರೀಡಾ ಕಾರ್ಯದರ್ಶಿ ವಿನ್ಯಾಸ್ ಹೊಸೊಳಿಕೆ, ನಿರ್ದೇಶಕರುಗಳಾಗಿ ದಯಾನಂದ ಕೇರ್ಪಳ, ಆರ್.ಕೆ.ಮಹಮ್ಮದ್, ಚರಣ್ ಕಾಯರ, ಪ್ರವೀಣ್ ಜಯನಗರ, ಶ್ರೀಮತಿ ತುಳಸಿ ಕೇವಳ, ವಿಖ್ಯಾತ್ ಬಾರ್ಪಣೆ, ಸುಧಾರಾಣಿ ಮುರುಳ್ಯ, ದಯಾನಂದ ಪಾತಿಕಲ್ಲು, ಗೌರವ ಸಲಹೆಗಾರರಾಗಿ ದಿನೇಶ್ ಮಡಪ್ಪಾಡಿ, ದೀಪಕ್ ಕುತ್ತಮೊಟ್ಟೆ, ಲಕ್ಷ್ಮೀನಾರಾಯಣ ಕಜೆಗದ್ದೆ, ಚಂದ್ರಶೇಖರ ಪನ್ನೆ, ದಿಲೀಪ್ ಬಾಬ್ಲುಬೆಟ್ಟು ಆಯ್ಕೆಯಾದರು. ಪ್ರವೀಣ್ ಜಯನಗರ ಸ್ವಾಗತಿಸಿದರು. ದಯಾನಂದ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ರಾಜೀವಿ ಲಾವಂತಡ್ಕ ವಂದಿಸಿದರು.