

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಶಿಬಿರವು ಕೊಡಿಯಾಲ ಗ್ರಾ.ಪಂ. ಇದರ ಗ್ರಂಥಾಲಯದಲ್ಲಿ ಇಂದು (ಸೆ.06) ನಡೆಯಿತು. ಶಿಬಿರದ ಉದ್ಘಾಟನೆಯನ್ನು ಕೊಡಿಯಾಲ ಭಜನಾ ಪರಿಷದ್ ಸದಸ್ಯರಾದ ಬಾಚೋಡಿ ವೆಂಕಟೇಶ್ ಪೈ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಿ.ಡಬ್ಲ್ಯೂ. ಐ. ಕಂಟ್ರಾಕ್ಟರ್ ಕರುಣಾಕರ ರೈ ಆಯುಷ್ಮಾನ್ ಕಾರ್ಡ್ ಮಹತ್ವದ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಮುರಳೀಧರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಭಾರತಿ, ಸೇವಾ ಪ್ರತಿನಿಧಿ ವನಿತಾ, ಒಕ್ಕೂಟದ ಅಧ್ಯಕ್ಷರಾದ ಪಿ.ಎಸ್.ಆನಂದ ಗೌಡ ಪೆರಿಯಾನ, ಪಿ.ಎಸ್.ಸಿ.ಮುಖ್ಯಸ್ಥರಾದ ನವೀನ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.